ಕಾನ್ಪುರ: ಕಾನ್ಪುರದಲ್ಲಿರುವ ಡಾ.ಅನುಷ್ಕಾ ತಿವಾರಿಯ ಎಂಪೈರ್ ಕ್ಲಿನಿಕ್‌ನಲ್ಲಿ ಕೂದಲು ಕಸಿ ಪ್ರಕ್ರಿಯೆಗೆ ಒಳಗಾದ ಇಬ್ಬರು ಎಂಜಿನಿಯರ್‌ಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ತೀವ್ರವಾದ ಮುಖದ ಊತ ಮತ್ತು ನೋವಿನ ನಂತರ ವಿನೀತ್ ದುಬೆ ಮಾರ್ಚ್ 14 ರಂದು ನಿಧನರಾದರು. ಹಾಗೈ ಮಾಯಾಂಕ್ ಕಟಿಯಾರ್ ನವೆಂಬರ್‌ನಲ್ಲಿ ಇದೇ ರೀತಿಯ ಪರಿಸ್ಥಿತಿಯಲ್ಲಿ ನಿಧನರಾದರು.
ಆಘಾತಕಾರಿ ದುರಂತದಲ್ಲಿ, ಉತ್ತರ ಪ್ರದೇಶದ ಕಾನ್ಪುರದ ಖಾಸಗಿ ಕ್ಲಿನಿಕ್‌ನಲ್ಲಿ ಕೂದಲು ಕಸಿ ಪ್ರಕ್ರಿಯೆಯ ನಂತರ ಇಬ್ಬರು ಇಂಜಿನಿಯರ್‌ಗಳು ಸಾವನ್ನಪ್ಪಿದ್ದಾರೆ. ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
40 ವರ್ಷದ ವಿನೀತ್ ದುಬೆ ಅವರ ಪತ್ನಿ ಜಯ ತ್ರಿಪಾಠಿ ಅವರು ಡಾ.ಅನುಷ್ಕಾ ತಿವಾರಿ ಅವರ ಕ್ಲಿನಿಕ್ ಎಂಪೈರ್ ವಿರುದ್ಧ ಮುಖ್ಯಮಂತ್ರಿಗಳ ಪೋರ್ಟಲ್‌ನಲ್ಲಿ ದೂರು ದಾಖಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಾರ್ಚ್ 13 ರಂದು ಕೂದಲು ಕಸಿ ಮಾಡಿದ ನಂತರ ತನ್ನ ಪತಿಗೆ ತೀವ್ರವಾದ ಸೋಂಕು ಕಾಣಿಸಿಕೊಂಡಿತು, ಇದು ಮುಖದ ಊತ, ತೀವ್ರವಾದ ನೋವಿನಿಂದಾಗಿ ಮಾರ್ಚ್ 14 ರಂದು ಕಾರ್ಯವಿಧಾನದ ಒಂದು ದಿನದ ನಂತರ ಅವರು ಸಾವನ್ನಪ್ಪಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತ್ರಿಪಾಠಿ ಅವರ ದೂರಿನ ಮೇರೆಗೆ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 (1) ರ ಅಡಿಯಲ್ಲಿ ಮೇ 9 ರಂದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪಶ್ಚಿಮ ಹೆಚ್ಚುವರಿ ಡಿಸಿಪಿ ವಿಜೇಂದ್ರ ದ್ವಿವೇದಿ ಖಚಿತಪಡಿಸಿದ್ದಾರೆ.