ಕೊಡವ ಕನ್ನಡದ ಸಹೋದರ ಭಾಷೆ ಎಂದ ಸಚಿವ
ಪ್ರಾದೇಶಿಕ ಭಾಷೆಯಾಗಿರುವ ಕೊಡವ ಭಾಷೆ ಕನ್ನಡದ ಸಹೋದರ ಭಾಷೆ ಇದ್ದಂತೆ ಎಂದು ಸಚಿವರೊಬ್ಬರು ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಭಾಷೆಯಾದ ಕೊಡವ ಭಾಷೆ ಕನ್ನಡದ ಸಹೋದರ ಭಾಷೆ ಇದ್ದಂತೆ. ಕೊಡವ ಭಾಷೆಯಲ್ಲಿ ಅಪ್ಪಚ್ಚ ಕವಿಗಳು ಕನ್ನಡದ ಲಿಪಿ ಬಳಸಿಕೊಂಡು ಸಾಕಷ್ಟು ಸಾಹಿತ್ಯ ರಚನೆ ಮಾಡಿದ್ದಾರೆ.
ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಹಾಕಿ ಉತ್ಸವದ ಜೊತೆಗೆ ಈ ಬಾರಿ ಕೊಡವ ಸಾಹಿತ್ಯ ಉತ್ಸವನ್ನು ಕೊಡಗಿನಲ್ಲಿ ಆಯೋಜನೆ ಮಾಡಿರುವುದು ಸಂತಸದ ಸಂಗತಿ ಎಂದು ಸಿ . ಟಿ ರವಿ ಹೇಳಿದ್ದಾರೆ.