ಸಂಕ್ರಾಂತಿ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಢ: ಕೋಡಿಮಠದ ಸ್ವಾಮೀಜಿ ಭವಿಷ್ಯ
ಬುಧವಾರ, 21 ಜುಲೈ 2021 (19:35 IST)
ಸಂಕ್ರಾಂತಿಗೂ ಮುನ್ನ ದೊಡ್ಡ ಅವಘಡ ಸಂಭವಿಸಲಿದೆ ಎಂದು ಹಾಸನದ ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಹಾಸನದಲ್ಲಿ ಮಂಗಳವಾರ ಮಾಧ್ಯಮಗಳ ಬಳಿ ಮಾತನಾಡಿದ ಅವರು, ನವೆಂಬರ್ ನಿಂದ ಸಂಕ್ರಾಂತಿ ಒಳಗೆ ಜಗತ್ತು ಬೆಚ್ಚಿ ಬೀಳುವಂತಹ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಢ ಸಂಭವಿಸಲಿದೆ ಎಂದರು.
ಪಂಚಭೂತಗಳಿಂದ ಅವಘಡ ಸಂಭವಿಸಲಿದ್ದು, ಈ ಅವಘಡದಿಂದ ಜಗತ್ತು ತಲ್ಲಣಿಸಲಿದೆ. ಜನರು ಭಯದಿಂದಲೇ ಸಾಯುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆಗಸ್ಟ್ 3ನೇ ವಾರದಿಂದ ರೋಗ ರುಜಿನ ಹೆಚ್ಚಳವಾಗಲಿವೆ ಎಂದು ಕೋಡಿಮಠದ ಸ್ವಾಮೀಜಿ ಹೇಳಿದರು.
ರಾಜಕೀಯ ಅನಿಶ್ಚಿತತೆ ಶೀಘ್ರವಾಗಿ ಸುಖಾಂತ್ಯ ಕಾಣಲಿದೆ. ದೇಶದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಅಸ್ಥಿರತೆ ಇರುವುದಿಲ್ಲ. ಭಾರೀ ಮಳೆಯಾಗಲಿದ್ದು, ಜಲಸ್ತಂಭ ಆಗಲಿದ್ದು, ಕೆರೆ ಕಟ್ಟೆಗಳು ತುಂಬಲಿವೆ ಎಂದು ಅವರು ಹೇಳಿದರು.