ಬಳ್ಳಾರಿ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಕೇಂದ್ರ ಸರ್ಕಾರದಿಂದ ಸೂಕ್ತ ಸವಲತ್ತುಗಳನ್ನು ತರಬಲ್ಲ ಹಾಗೂ ಸಂಸತ್ತಿನಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ಮಂಡಿಸಬಲ್ಲ ಉಗ್ರಪ್ಪ ನವರನ್ನು ಬೆಂಬಲಿಸಬೇಕು ಎಂದು ಎಮ್.ಎಲ್.ಸಿ.ಕೆ.ಸಿ. ಕೊಂಡಯ್ಯ ಹೇಳಿದ್ದಾರೆ.
ಬಳ್ಳಾರಿ ನಗರದಲ್ಲಿ ಮಾತನಾಡಿದ ಅವರು, ಈ ಅನಗತ್ಯ ಲೊಕಸಭಾ ಚುನಾವಣೆ ನಡೆಯಲು ಶ್ರೀರಾಮುಲು ಕಾರಣರಾಗಿದ್ದು, ಒಂದು ಮತಗಟ್ಟೆಗೆ 65 ಸಾವಿರ ವೆಚ್ಚದಂತೆ ಒಟ್ಟು 8 ಕೋಟಿ ರೂ. ಜನರ ಹಣ ಪೋಲಾಗುತ್ತಲಿದೆ ಎಂದು ಆರೋಪಿಸಿದರು.
ಬಿಜೆಪಿಯಿಂದ ಶ್ರೀರಾಮುಲು ಅವರ ಸಹೋದರಿ ಶಾಂತ ಸಂಸತ್ ಗೆ ಆಯ್ಕೆಯಾಗಿ ಜಿಲ್ಲೆಯ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಹರಿಸಲಿಲ್ಲ. 1999 ರಲ್ಲಿ ಸೋನಿಯಾ ಗಾಂದಿ ಗೆದ್ದನಂತರ 3.300 ಕೋಟಿಗಳ ಸೋನಿಯಾ ಪ್ಯಾಕೇಜ್ ಬಂದ ನಂತರ ಜಿಲ್ಲೆಯಲ್ಲಿ ಅರೋಗ್ಯ, ಶಿಕ್ಷಣ, ಮೂಲಭೂತ ಸೌರ್ಕಗಳ ಜೊತೆ ಬಳ್ಳಾರಿ ವಿದ್ಯುತ್ ಶಾಖೋತ್ಪನ ಕೇಂದ್ರ ಸ್ದಾಪನೆಯಾಯ್ತು ಎಂದರು.
ಜಿಲ್ಲೆಯಲ್ಲಿ ಆರು ಜನ ಕಾಂಗ್ರೆಸ್ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಒರ್ವ ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಪಕ್ಷದಲ್ಲಿದ್ದು ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿದರು.