ಬಡವರ ಪರ ನಿಂತ ಕೋಟ ಶ್ರೀನಿವಾಸ ಪೂಜಾರಿ

ಭಾನುವಾರ, 14 ಅಕ್ಟೋಬರ್ 2018 (15:42 IST)
ಸರ್ಕಾರಿ ಜಾಗದಲ್ಲಿ ಕೂತವರ ಮನೆ ತೆರವಿಗೆ ಆದೇಶ ಹಿನ್ನೆಲೆಯಲ್ಲಿ ಮನೆ ಒಡೆದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಡ ಕುಟುಂಬಗಳು ಕಣ್ಣೀರಿಟ್ಟಿವೆ.

ಉಡುಪಿ ಜಿಲ್ಲೆ ಕುಂದಾಪುರದ ಕಾಳಾವರ ದೇವಸ್ಥಾನ ಬೆಟ್ಟುವಿನಲ್ಲಿನ ಮನೆಗಳು ಇವಾಗಿವೆ. ಆದೇಶದಿಂದಾಗಿ ಬಡ ಕುಟುಂಬಗಳು ಕಂಗಾಲಾಗಿವೆ. ನಿವೇಶನ ರಹಿತರ ಏಳು ಮನೆಗಳು ಇವಾಗಿದ್ದು, ಮನೆ ಒಡೆದರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ ನೀಡಲಾಗಿದೆ.

ನಮ್ಮನ್ನು ಕೊಂದು ಬಳಿಕ ಮನೆ ಕೆಡವಿ ಎಂದು ಕುಟುಂಬದವರು ಹೇಳಿದ್ದಾರೆ. ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಬಡ ಕುಟುಂಬಗಳು, ತಮ್ಮ ಮನವಿ ಪುರಸ್ಕರಿಸುವಂತೆ ಕೋರಿದ್ದಾರೆ. ಹೀಗಾಗಿ ಬಡವರ ಪರವಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನಿಂತಿದ್ದಾರೆ.  ಬಡವರ ಮನೆ ಮುಟ್ಟಿದ್ರೆ ಸುಮ್ಮನಿರಲ್ಲ ಎಂದಿರುವ ಕೋಟ, ಜಿಲ್ಲೆಯಲ್ಲಿ ಅಧಿಕಾರಿಗಳದ್ದೇ ದರ್ಬಾರ್ ಆಗಿದೆ.

ಸರಕಾರ ಆಡಳಿತ ನಡೆಸ್ತಿಲ್ಲ, ಅಧಿಕಾರಿಗಳೇ ನಡೆಸ್ತಿದ್ದಾರೆ. ಈ ಅವ್ಯವಸ್ಥೆ ಬಗ್ಗೆ ಸಿಎಂಗೆ ಪ್ರಶ್ನಿಸುವೆ ಎಂದಿದ್ದಾರೆ. ಅಧಿಕಾರಿಗಳಿಗೆ ಕೊಡುವಲ್ಲಿ ಉತ್ತರ ಕೊಡುತ್ತೇವೆ ಎಂದೂ ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ