ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ ಬೆದರಿಕೆ!

ಭಾನುವಾರ, 14 ಅಕ್ಟೋಬರ್ 2018 (07:43 IST)
ತಿರುವನಂತಪುರಂ: ಕೇರಳದಲ್ಲಿ ಸುಪ್ರೀಂಕೋರ್ಟ್ ನ ಶಬರಿಮಲೆ ತೀರ್ಪಿನ ವಿರುದ್ಧದ ಪ್ರತಿಭಟನೆ ಜೋರಾಗಿದ್ದು, ಒಂದು ವೇಳೆ ಋತುಮತಿಯಾಗುವ ಮಹಿಳೆಯರು ದೇವಾಲಯ ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶಿವಸೇನೆ ಬೆದರಿಕೆ ಒಡ್ಡಿದೆ.

ಅಕ್ಟೋಬರ್ 17 ರಂದು ನಮ್ಮ ಮಹಿಳಾ ಕಾರ್ಯಕರ್ತರು ಪಂಪಾ ನದಿ ಬಳಿ ಸೇರಲಿದ್ದು, ಮಹಿಳೆಯರು ದೇವಾಲಯ ಪ್ರವೇಶಿಸಲು ಪ್ರಯತ್ನಿಸಿದರೆ ಸಾಮೂಹಿಕ ಆತ್ಮಹತ್ಯೆ ಮಾಡಲಿದ್ದಾರೆ ಎಂದು ಕೇರಳದ ಶಿವಸೇನೆ ಘಟಕ ಬೆದರಿಕೆ ಹಾಕಿದೆ.

ಕೇರಳ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ತೀರ್ಪು ಪಾಲಿಸುವುದಾಗಿ ಹೇಳಿದೆ. ಆದರೆ ಪಂತಳ ರಾಜಮನೆತನ ಸೇರಿದಂತೆ, ಕೆಲವು ಸಂಘಟನೆಗಳು ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ