ಹಣ್ಣು ಬೇಡ ಎನ್ನುವ ಕೋತಿ ಗುಟ್ಕಾ ಚಟಕ್ಕೆ ಅಂಟಿಕೊಂಡಿದೆ!

ಶುಕ್ರವಾರ, 23 ನವೆಂಬರ್ 2018 (12:58 IST)
ಹಣ್ಣು ಕೊಟ್ಟರೆ ತಿನ್ನದ ... ಗುಟ್ಕಾ ಕೊಟ್ಟರೆ  ಬಿಡದ ಕೋತಿ ಪ್ರವಾಸಿಗರ   ಹಾಗೂ ಗ್ರಾಮದ ಮನೆ ಮನೆಗಳಲ್ಲಿ ಈ ಕೋತಿಯ ಮಾತೆ ಮಾತು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಗುಪ್ಪಿ ಗ್ರಾಮದ ಬಸ್ ನಿಲ್ದಾಣದಲ್ಲಿ  ಕೋತಿಯೊಂದು ನಿತ್ಯವೂ ಕಾಣಿಸಿಕೊಳ್ಳುತ್ತಿದ್ದು ಜನರೊಂದಿಗೆ ಬೆರೆಯುತ್ತಿದೆ. ಆದರೆ ಆರಂಭದಲ್ಲಿ ಹಣ್ಣು ಹಂಪಲು ತಿನ್ನುತ್ತಿದ್ದ ಈ ಕೋತಿಯ ರಂಪಾಟ ಸದ್ಯ ಹೆಚ್ಚಾಗಿದೆ. ಪ್ರಯಾಣಿಕರ ಜೇಬಿನಿಂದ ಗುಟ್ಕಾ ಚೀಟಿ ಎಗರಿಸುತ್ತಿದೆ.

ಈ ಕೋತಿಯ ಗುಟ್ಕಾ ಚಟದಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಕೋತಿಯು  ಗುಟ್ಕಾ ಮತ್ತಿನಿಂದ  ಮಕ್ಕಳು ಮಹಿಳೆಯರ ಹಾಗೂ ಜನರ ಮೇಲೆ‌ ಕೋತಿ ದಾಳಿ ಮಾಡುವ ಆತಂಕವು ಸದ್ಯ ಶಿರಗುಪ್ಪಿ ಗ್ರಾಮಸ್ಥರನ್ನು ಕಾಡುತ್ತಿದೆ.
ಈ ಕೋತಿರಾಯನ ರಂಪಾಟವು ದಿನದಿಂದ ದಿನಕ್ಕೆ ಹೆಚ್ಚಾಗಿ ಹೋಗುತ್ತಿದ್ದು, ಗುಟ್ಕಾ ಚಟಕ್ಕೆ ಅಂಟಿಕೊಂಡ  ಕೋತಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಡವಿಗೆ ಸಾಗಿಸಿ ಕಡಿವಾಣ ಹಾಕಬೇಕಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ