ಬೆಳ್ಳುಳ್ಳಿ ಚಟ್ನಿ ಪುಡಿ

ಗುರುವಾರ, 11 ಅಕ್ಟೋಬರ್ 2018 (15:15 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು :
* 100 ಗ್ರಾಂ ಬೆಳ್ಳುಳ್ಳಿ
* 50 ಗ್ರಾಂ ಒಣಮೆಣಸು
* 25 ಗ್ರಾಂ ಹುಣಸೆಹುಲಿ
* 25 ಗ್ರಾಂ ಉಪ್ಪು
 
  ತಯಾರಿಸುವ ವಿಧಾನ :
 
 ಮೊದಲು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಬೇಕು. ಹಾಗೆಯೇ ಒಣಮೆಣಸನ್ನೂ ಕರಿಯಬೇಕು. ನಂತರ ಹುರಿದಿಟ್ಟ ಬೆಳ್ಳುಳ್ಳಿ, ಹುರಿದ ಮೆಣಸು, ಉಪ್ಪು ಮತ್ತು ಹುಳಿಯನ್ನು ಸೇರಿಸಿ ಮಿಕ್ಸಿಗೆ ಹಾಕಿ ಗರಿಗರಿಯಾಗಿ ರುಬ್ಬಿಕೊಳ್ಳಬೇಕು. ( ಹುಣಸೆಹುಳಿಯ ಬದಲು ಹುಳಿಪುಡಿಯನ್ನು ಬಳಸಿದರೆ ಉತ್ತಮ) ಈಗ ಸಿದ್ಧವಾದ ಚಟ್ನಿಪುಡಿಯನ್ನು ಗಂಜಿ ಊಟದ ಜೊತೆ, ಮೊಸರನ್ನ, ದೋಸೆ, ಇಡ್ಲಿ ಹೀಗೆ ಎಲ್ಲಾ ತಿಂಡಿಗಳ ಜೊತೆ ಸವಿಯಲು ರುಚಿಕರವಾಗಿರುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ