ಅನೈತಿಕ ಚಟುವಟಿಕೆ ತಾಣವಾದ ನಗರಸಭೆ ಕಚೇರಿ ಕಟ್ಟಡ
ನಗರದ ಹೃದಯ ಭಾಗದಲ್ಲೇ ಪಾಳು ಬಿದ್ದ ಸರ್ಕಾರಿ ಕಟ್ಟಡ ಇದೀಗ ಅನೈತಿಕ ತಾಣವಾಗಿ ಮಾರ್ಪಟ್ಟಿದೆ.
ಜೂಜು ಕೋರರು- ಮದ್ಯವ್ಯಸನಿಗಳ ಆಶ್ರಯ ತಾಣವಾದ ಸರ್ಕಾರಿ ಕಟ್ಟಡ ದಿನೇ ದಿನೇ ಅನೈತಿಕ ತಾಣವಾಗುತ್ತಿದೆ.
ಹಾಸನದಲ್ಲಿ 2 ವರ್ಷಗಳ ಹಿಂದೆ ನಗರಸಭೆ ಕಚೇರಿಯಾಗಿ ಪರಿವರ್ತನೆಗೊಂಡಿದ್ದ ಈ ಕಟ್ಟಡ ಈಗ ಹಾಳು ಬೀಳುತ್ತಿದೆ.
ಲಕ್ಷಾಂತರ ರೂ. ವ್ಯಯ ಮಾಡಿ ಕಟ್ಟಡ ರಿಪೇರಿ ಮಾಡಿದ್ದ ನಗರಸಭೆಯ ಕಾರ್ಯಕ್ಕೆ ಸೂಕ್ತ ಫಲ ದೊರಕುತ್ತಿಲ್ಲ.
ಎರಡೇ ವರ್ಷಕ್ಕೆ ಮತ್ತೆ ಬೇರೆಡೆಗೆ ಶಿಫ್ಟ್ ಆದ ನಗರಸಭೆಯಿಂದಾಗಿ ಪಾರ್ಕಿಂಗ್ ತಾಣವಾಗಿ ಹೃದಯ ಭಾಗದಲ್ಲಿರುವ ಕಟ್ಟಡ ಮಾರ್ಪಡುತ್ತಿದೆ.
ಹಳೆ ಕಟ್ಟಡ ಸುತ್ತ ಗಿಡಗಂಟೆ ಬೆಳೆದು ಪಾಳು ಬಿದ್ದಿದೆ. ಹಳೆ ಮುನ್ಸಿಪಲ್ ಶಾಲಾಕಟ್ಟಡ
ಜಿಲ್ಲಾ ಪಂಚಾಯ್ತಿ ಮತ್ತು ಜಿಲ್ಲಾಧಿಕಾರಿ ಕಟ್ಟಡಗಳ ಪಕ್ಕದಲ್ಲೇ ಇರುವ ಹಳೇ ನಗರ ಸಭೆ ಕಟ್ಟಡ ಅನೈತಿಕ ತಾಣವಾಗುತ್ತಿರುವುದು ಸಾರ್ವಜನಿಕರಲ್ಲಿ ಬೇಸರಕ್ಕೆ ಕಾರಣವಾಗಿದೆ.