ಕಲಬುರಗಿಯಲ್ಲಿ ಶಂಕೆ ಇರೋ ವ್ಯಕ್ತಿಗಳಿಗೆ ಕೋವಿಡ್ 19 ಪರೀಕ್ಷೆ

ಮಂಗಳವಾರ, 17 ಮಾರ್ಚ್ 2020 (18:28 IST)
ಕೊರೊನಾ ವೈರಸ್ ನಿಂದ ದೇಶದಲ್ಲಿ ಮೊದಲ ವ್ಯಕ್ತಿ ಸಾವು ಕಂಡ ಕಲಬುರಗಿಯಲ್ಲಿ ಕೋವಿಡ್ 19 ಪರೀಕ್ಷೆ ಶಂಕಿತರಲ್ಲಿ ಮಾಡಲಾಗುತ್ತಿದೆ. 

ಕೋವಿಡ್-19 (ನೋವೆಲ್ ಕೊರೋನಾ ವೈರಸ್) ಪರೀಕ್ಷೆ ರೋಗದ ಲಕ್ಷಣಗಳನ್ನು ಕಂಡ ಶಂಕಿತರಿಗೆ ಮಾತ್ರ ಮಾಡಲಾಗುತ್ತದೆ ಎಂದು ಡಾ.ಅನೀಲ ತಾಳಿಕೋಟಿ ಹೇಳಿದ್ದಾರೆ. ಕಲಬುರಗಿ "ಪತ್ರಿಕಾ ಭವನ" ದಲ್ಲಿ ಪತ್ರಕರ್ತರಿಗೆ ಆಯೋಜಿಸಲಾದ ಕೋವಿಡ್-19 (ನೋವೆಲ್ ಕೊರೋನಾ ವೈರಸ್) ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕೊರೋನಾ ಬಾಧಿತ ದೇಶಗಳಿಂದ ಹಿಂದಿರುಗಿದ ವ್ಯಕ್ತಿಯ ವಿದೇಶ ಪ್ರವಾಸದ ಇತಿಹಾಸ, ಸೊಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಅಥವಾ ಕೋರೋನಾ ವೈರಸ್ ಲಕ್ಷಣಗಳಾದ ಕೆಮ್ಮು, ಜ್ವರ, ಶೀತ, ನೆಗಡಿ, ಉಸಿರಾಟದ ತೊಂದರೆಗಳಿದ್ದಲ್ಲಿ ಮಾತ್ರ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೊರೋನಾ ಸೋಂಕಿಲ್ಲದೆ ಸಾಮಾನ್ಯವಾಗಿ ಕಾಣುವ ಇಂತಹ ಎಲ್ಲ ಲಕ್ಷಣಗಳಿಗೆ ಕೋವಿಡ್-19 ಪರೀಕ್ಷೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೈರಸ್ ಮೊಟ್ಟ ಮೊದಲ ಬಾರಿಗೆ ಚೀನಾದ ವುಹಾನ್ ಸಮುದ್ರದ ಆಹಾರ ಮಾರುಕಟ್ಟೆ ಪ್ರದೇಶದ ಜನರಲ್ಲಿ “ಉಸಿರಾಟದ” ಸಮಸ್ಯೆಯಾಗಿ ಕಂಡುಬಂತು. ಇದನ್ನು ನ್ಯೂಮೋನಿಯಾ ಎಂದು ಕಾಣಲಾಗಿತ್ತಾದರೂ ಕ್ರಮೇಣ ಬಹುತೇಕ ಜನರಲ್ಲಿ ಈ ಹೊಸ ವೈರಸ್ ಹರಡಿದ್ದರಿಂದ ಇದನ್ನು ನೋವೆಲ್ ಕೋವಿಡ್-19 ಎಂದು ಗುರುತಿಸಿ ವಿಶ್ವಸಂಸ್ಥೆಗೆ ಮಾಹಿತಿ ನೀಡಲಾಯಿತು.

ಸಾರ್ಸ್ ಕೋವಿಡ್-2 ಮೂಲದಿಂದ ಕೋವಿಡ್-19 ವೈರಸ್ ಹೊಸದಾಗಿ ಹುಟ್ಟಿಕೊಂಡಿರುವುದನ್ನು ಗುರುತಿಸಿ ವಿಶ್ವಸಂಸ್ಥೆ  2020ರ ಜನವರಿ 30ಕ್ಕೆ ಈ ವೈರಸ್ ಉಲ್ಲೇಖಿಸಿ ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದಲ್ಲದೆ ವೈರಸ್ ವಿಶ್ವವ್ಯಾಪಿ ಹರಡಿದ್ದರಿಂದ ಮಾರ್ಚ್ 11 ರಂದು ಇದನ್ನು “ಸಾಂಕ್ರಾಮಿಕ” ಎಂದು ಘೋಷಣೆ ಮಾಡಿತು ಎಂದಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ