ಪಿಜಿ, ಹಾಸ್ಟೆಲ್ ಖಾಲಿ ಮಾಡಿ : ಕೊರೊನಾ ಎಫೆಕ್ಟ್
ಮಹಾಮಾರಿ ಕೊರೊನಾ ವೈರಸ್ ಭೀತಿ ಪಿಜಿ, ಹಾಸ್ಟೆಲ್ ಗಳಲ್ಲಿಯೂ ಹೆಚ್ಚಾಗುತ್ತಿದೆ.
ಹೀಗಂತ ಬಿಬಿಎಂಪಿ ಆಯುಕ್ತರು ಹಾಗೂ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಒಂದು ವಾರ ಶಾಲೆ, ಮಾಲ್, ಸಿನಿಮಾ ಥೇಟರ್ ಬಂದ್ ಮಾಡುವಂತೆ ಸರಕಾರ ಸೂಚನೆ ನೀಡಿರುವ ಬೆನ್ನಲ್ಲೇ ಇದೀಗ ಪಿಜಿ ಸೆಂಟರ್ ಗಳು ಹಾಗೂ ಹಾಸ್ಟೆಲ್ ಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.
ಶಾಲೆ, ಕಾಲೇಜ್ ಬಂದ್ ಆಗಿರುವುದರಿಂದ ನಿಮ್ಮ ನಿಮ್ಮ ಊರಿಗೆ ತೆರಳಿ ಅಂತ ಅಧಿಕಾರಿಗಳು ಮನವಿ ಮಾಡಿದ್ದಾರೆ.