ಕೆಪಿಸಿಸಿ ಕಚೇರಿಯಿಂದ ಎಸ್.ಎಂ. ಕೃಷ್ಣ ಫೋಟೋ ತೆಗೆದಿದ್ದಕ್ಕೆ ಗರಂ ಆದ ಪರಮೇಶ್ವರ್

ಶನಿವಾರ, 16 ಸೆಪ್ಟಂಬರ್ 2017 (18:27 IST)
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪೋಟೋ ತೆಗೆದಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗರಂ ಆದ ಘಟನೆ ನಡೆದಿದೆ. ಬಳಿಕ ತಾವೇ ಸ್ವತಃ ನಿಂತು ಎಸ್.ಎಂ. ಕೃಷ್ಣ ಫೋಟೋವನ್ನ ಕೆಪಿಸಿಸಿ ಕಚೇರಿಯಲ್ಲಿ ಹಾಕಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದವರ ಫೋಟೋಗಳನ್ನ ಗೋಡೆಗೆ ನೇತು ಹಾಕಲಾಗಿದೆ. ಅದರಲ್ಲಿ ಎಸ್.ಎಂ. ಕೃಷ್ಣ ಫೋಟೋ ಸಹ ಇತ್ತು. ಆದರೆ, ಇವತ್ತು ಚಾಮರಾಜಪೇಟೆಯ ಕಾರ್ಯಕರ್ತರೆನ್ನಲಾದ ವ್ಯಕ್ತಿ ಎಸ್.ಎಂ. ಕೃಷ್ಣ ಫೋಟೋ ತೆಗೆದು ಕೊಠಡಿಯೊಂದರಲ್ಲಿ ಇಟ್ಟಿದ್ದಾನೆ. ಈ ಸಂದರ್ಭ ಕೆಪಿಸಿಸಿ ಸಿಬ್ಬಂದಿ-ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಘಟನೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗಮನಕ್ಕೆ ಬಂದಿದ್ದು, ಫೋಟೋ ತರಿಸಿ ಮತ್ತೆ ಗೋಡೆಗೆ ನೇತು ಹಾಕಿಸಿದ್ದಾರೆ.

ಎಸ್,ಎಂ, ಕೃಷ್ಣ ಪಕ್ಷ ತೊರೆದಿರಬಹುದು. ಆದರೆ, ಪಕ್ಷಕ್ಕಾಗಿ ದುಡಿದಿದ್ದಾರೆ. ಸಿಎಂ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂತಹ ಘಟನೆ ಮತ್ತೆ ನಡೆಯಬಾರದೆಂದು ಎಚ್ಚರಿಕೆ ನೀಡಿದರು. ಈ ಕೃತ್ಯ ಎಸಗಿದ ಕಾರ್ಯಕರ್ತನ ವಿರುದ್ಧ ಕ್ರಮ ಕೈಗೊಳ್ಳುವುದಾಗು ಗುಡುಗಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ