ಕೆಪಿಎಂಇ ಮಸೂದೆ ಜಾರಿ ನನ್ನ ರಾಜಕೀಯ ಬದುಕಿನ ಐತಿಹಾಸಿಕ ಕಾರ್ಯ : ರಮೇಶ್ ಕುಮಾರ್
ಶನಿವಾರ, 18 ನವೆಂಬರ್ 2017 (16:40 IST)
ಖಾಸಗಿ ವೈದ್ಯರ ಕೆಪಿಎಂಇ ಮಸೂದೆ ಜಾರಿ ನನ್ನ ರಾಜಕೀಯ ಬದುಕಿನ ಐತಿಹಾಸಿಕ ಕಾರ್ಯವಾಗಿದೆ ಎಂದು ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಬಡವರಿಗೆ, ಜನಸಾಮಾನ್ಯರಿಗೆ ಒಳ್ಳೆಯದಾಗಬೇಕು ಎನ್ನುವ ಉದ್ದೇಶದಿಂದಲೇ ಮಸೂದೆ ಜಾರಿಗೆ ಸರಾರ ಮುಂದಾಗಿದೆ. ಖಾಸಗಿ ವೈದ್ಯರು ನಮ್ಮ ಶತ್ರುಗಳಲ್ಲ. ಅವರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ ಎಂದು ತಿಳಿಸಿದ್ದಾರೆ.
ಸರಕಾದ ಕೆಪಿಇಎಂ ಮಸೂದೆಯನ್ನು ತಪ್ಪಾಗಿ ಗ್ರಹಿಸಿದ ಖಾಸಗಿ ವೈದ್ಯರು ಪ್ರತಿಭಟನೆಯಲ್ಲಿ ತೊಡಗಿದ್ದರು. ನಂತರ ನಡೆದ ಮಾತುಕತೆಯಲ್ಲಿ ತಪ್ಪುಗ್ರಹಿಕೆ ಅಂತ್ಯವಾಗಿರುವುದಕ್ಕೆ ಸಂತಸವಾಗಿದೆ ಎಂದರು.
ವಿಧೇಯಕದಲ್ಲಿ ಯಾವುದೇ ಗೊಂದಲಗಳು ಸಹ ಈಗ ಇಲ್ಲ. ಎಲ್ಲವೂ ಇತ್ಯರ್ಥವಾಗಿದೆ. ವಿಧೇಯಕದಲ್ಲಿ ಹೇಳಿಕೊಳ್ಳುವ ರೀತಿಯಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ರೋಗಿಯ ಸಾವಿನ ನಂತರ ಬಿಲ್ ಕಟ್ಟಿಲ್ಲವೆಂದು ಶವ ಹಸ್ತಾಂತರಕ್ಕೆ ನಿರಾಕರಿಸುವಂತಿಲ್ಲ ಎಂಬ ಅಂಶವನ್ನು ಹೊಸ ವಿಧೇಯಕದಲ್ಲಿ ಸೇರಿಸಲಾಗಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.