ಕೃಷ್ಣ ನದಿ ನೀರು ಹಂಚಿಕೆ: ರಾಜ್ಯಕ್ಕೆ ಬಿಗ್ ರಿಲೀಫ್

ಬುಧವಾರ, 19 ಅಕ್ಟೋಬರ್ 2016 (11:53 IST)
ಕೃಷ್ಣ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಆಂಧ್ರಪ್ರದೇಶಕ್ಕೆ ನೀಡುವ ನೀರನ್ನೇ ತೆಲಂಗಾಣ ಹಂಚಿಕೊಳ್ಳಬೇಕು ಎಂದು ಕೃಷ್ಣ ನ್ಯಾಯಾಧೀಕರಣ ಮಹತ್ವದ ತೀರ್ಪು ನೀಡಿದೆ.
 
ಆಂಧ್ರಪ್ರದೇಶ ಇಬ್ಭಾಗವಾದ ಬಳಿಕ ಕೃಷ್ಣ ನದಿ ನೀರಿನಲ್ಲಿ ನಮಗೂ ಪಾಲು ಬೇಕೆಂದು ತೆಲಂಗಾಣ ಸರಕಾರ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧೀಕರಣ ತೀರ್ಪು ನೀಡಿದೆ. 
 
ಕೃಷ್ಣ ನದಿಯಿಂದ ಕರ್ನಾಟಕಕ್ಕೆ 911 ಟಿಎಂಸಿ ನೀರು, ಮಹಾರಾಷ್ಟ್ರಕ್ಕೆ 611 ಟಿಎಂಸಿ ನೀರು ಹಾಗೂ ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರು ಹಂಚಿಕೆಯಾಗುತ್ತಿದೆ. ಇದೀಗ ಆಂಧ್ರಪ್ರದೇಶ ಇಬ್ಭಾಗವಾದ ಹಿನ್ನೆಲೆಯಲ್ಲಿ ಆಂಧ್ರಕ್ಕೆ ಹಂಚಿಕೆಯಾಗುತ್ತಿರುವ ನೀರನ್ನೆ ತೆಲಾಂಗಣ ಹಂಚಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಾಧೀಕರಣ ತೀರ್ಪು ನೀಡಿದೆ
 
2010 ರಲ್ಲಿ ಕೃಷ್ಣ ನದಿ ನೀರು ಹಂಚಿಕೆ ಅಂತಿಮ ತೀರ್ಪು ಬಂದ ಬಳಿಕ ಆಂಧ್ರಪ್ರದೇಶ ಇನ್ನಷ್ಟು ನೀರು ಬೇಕು ಎಂದು ನ್ಯಾಯಾಧೀಕರಣದಲ್ಲಿ ಮರು ಅರ್ಜಿ ಸಲ್ಲಿಸಿತ್ತು. ಬಳಿಕ 2013ರಲ್ಲಿ ಕರ್ನಾಟಕ ಪಾಲಿನ 911 ಟಿಎಂಸಿ ನೀರಲ್ಲಿ 4 ಟಿಎಂಸಿ ನೀರನ್ನು ಆಂಧ್ರಕ್ಕೆ ಬಿಡುವಂತೆ ಆದೇಶ ನೀಡಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ