ಡೆಡ್ ಸ್ಟೋರೇಜ್ ಹಂತ ತಲುಪಿದ ಕೆಆರ್ ಎಸ್ ಡ್ಯಾಮ್!

ಶನಿವಾರ, 3 ಆಗಸ್ಟ್ 2019 (09:42 IST)
ಮಂಡ್ಯ: ಒಂದೆಡೆ ಮಳೆಯ ಕೊರತೆ. ಇನ್ನೊಂದೆಡೆ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸುವ ಆದೇಶ ಪಾಲಿಸಬೇಕಾದ ಅನಿವಾರ್ಯತೆ. ಇದೆಲ್ಲದರ ನಡುವೆ ಕೆಆರ್ ಎಸ್ ಡ್ಯಾಮ್ ಒಡಲು ಬರಿದಾಗುವ ಹಂತಕ್ಕೆ ತಲುಪಿದೆ.


ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶದಂತೆ ಪ್ರತಿನಿತ್ಯ 1 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಇತ್ತ ಕಾವೇರಿ ಪ್ರದೇಶದಲ್ಲಿ ನಿರೀಕ್ಷಿತ ಮಳೆಯಾಗದೇ ಡ್ಯಾಮ್ ನಲ್ಲಿ ಸಾಕಷ್ಟು ನೀರಿಲ್ಲ. ಇದರಿಂದಾಗಿ ಇನ್ನು ಐದೇ ದಿನಗಳಲ್ಲಿ ಕೆಆರ್ ಎಸ್ ಡ್ಯಾಮ್ ಡೆಡ್ ಸ್ಟೋರೇಜ್ ಹಂತ ತಲುಪಿದೆ.

ಹಾಲಿ 83 ಅಡಿ ನೀರಿದ್ದು, ನಿತ್ಯ ತಮಿಳುನಾಡಿಗೆ 1 ಟಿಎಂಸಿ ನೀರು ಸೇರಿದಂತೆ ಇನ್ನು ಐದು ದಿನ ಸುಮಾರು 7 ಸಾವಿರ ಕ್ಯುಸೆಕ್ಸ್ ನೀರು ಹರಿಸಿದರೆ ಡ್ಯಾಮ್ ನಲ್ಲಿ ನೀರಿನ ಮಟ್ಟ 75 ಅಡಿಗೆ ತಲುಪಲಿದೆ. ಇದರೊಂದಿಗೆ ಡ್ಯಾಮ್ ಡೆಡ್ ಸ್ಟೋರೇಜ್ ಹಂತ ತಲುಪಲಿದೆ. ಇತ್ತ ರೈತರು ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಸುಪ್ರೀಂಕೋರ್ಟ್ ಆದೇಶ ಪಾಲಿಸಲೇಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ಸರ್ಕಾರವಿದೆ. ಈ ನಡುವೆ ಸಂಸದೆ ಸುಮಲತಾ ಅಂಬರೀಶ್ ಕೂಡಾ ಸಂಸತ್ತಿನಲ್ಲಿ ಈ ವಿಚಾರವಾಗಿ ವಾದ ಮಂಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ