ಅತೃಪ್ತರು ಅನರ್ಹರಾಗುವುದರಿಂದ ಇಂದು ಬಿಜೆಪಿಗೆ ಆಗುವ ಲಾಭವೇನು? ನಷ್ಟವೇನು?

ಸೋಮವಾರ, 29 ಜುಲೈ 2019 (09:17 IST)
ಬೆಂಗಳೂರು: ವಿಶ್ವಾಸ ಮತ ಸಾಬೀತಿಗೆ ಇನ್ನು ಒಂದು ದಿನ ಬಾಕಿಯಿರುವಾಗ ಸ್ಪೀಕರ್ ರಮೇಶ್ ಕುಮಾರ್ ಅತೃಪ್ತ ಶಾಸಕರನ್ನುಅನರ್ಹಗೊಳಿಸಿದ್ದಾರೆ. ಆದರೆ ಇದರಿಂದ ಬಿಜೆಪಿಗೆ ಆಗುವ ಲಾಭವೇನು? ನಷ್ಟವೇನು?


ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವುದರಿಂದ ಬಿಜೆಪಿಗೆ ನಾಳೆ ಸುಲಭವಾಗಿ ವಿಶ್ವಾಸ ಮತ ಸಾಬೀತುಪಡಿಸಬಹುದು. ಒಂದು ವೇಳೆ ಅತೃಪ್ತರ ರಾಜೀನಾಮೆ ಇತ್ಯರ್ಥವಾಗದೇ ಇದ್ದಿದ್ದರೆ ಅವರು ಸರ್ಕಾರದ ಪರ ಮತ ಹಾಕಿದ್ದರೂ ಮುಂದಿನ ದಿನಗಳಲ್ಲಿ ಅವರಿಗೂ ಸೂಕ್ತ ಸ್ಥಾನ ಮಾನ ನೀಡಬೇಕಿತ್ತು.

ಆದರೆ ಈಗ ಅನರ್ಹಗೊಳಿಸಿರುವ ತೀರ್ಪನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿಹಿಡಿದರೆ ಆ 14 ಸ್ಥಾನಗಳಿಗೆ ಉಪಚುನಾವಣೆ ಮಾಡಲೇಬೇಕಾಗುತ್ತದೆ. ಆಗ ಬಿಜೆಪಿ ಇವುಗಳಲ್ಲಿ 10 ಸ್ಥಾನ ಗೆದ್ದರೂ ಬಹುಮತಕ್ಕೆ ಕೊರತೆಯಾಗದು. ಒಂದು ವೇಳೆ ಈ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೇಕಾಗುವಷ್ಟು ಸ್ಥಾನ ಬರದೇ ಇದ್ದರೆ ಸರ್ಕಾರ ಬಿದ್ದು ಹೋಗುವ ಅಪಾಯವಿದೆ. ಅದೇ ಕಾರಣಕ್ಕೆ ಈಗ ಬಿಜೆಪಿ ನಾಯಕರು ಸ್ಪೀಕರ್ ನಿರ್ಧಾರವನ್ನು ವಿರೋಧಿಸುತ್ತಿರುವುದು. ಅದೇನೇ ಇದ್ದರೂ ಸದ್ಯಕ್ಕೆ ಬಿಜೆಪಿ ಸರ್ಕಾರ ಬಚಾವ್ ಆಗಬಹುದು. ಆದರೆ ಮುಂದೆ ದೊಡ್ಡ ಅಪಾಯವಿರುವುದಂತೂ ಖಂಡಿತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ