ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರನ್ನು ಎಳೆದು ತಂದಿರುವುದಕ್ಕೆ ಕೆಎಸ್ ಈಶ್ವರಪ್ಪ ಅನುಕಂಪ ವ್ಯಕ್ತಪಡಿಸಿದ್ದಾರೆ. ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಸಿದ್ದರಾಮಯ್ಯನವರ ಮನೆ ನಮ್ಮ ಮನೆ ಪಕ್ಕದಲ್ಲೇ ಇದ್ದರು. ನಾನು ಸಿದ್ದರಾಮಯ್ಯನವರಿಗೆ ಒಮ್ಮೆ ನಮ್ಮ ಮನೆಯವರು ಅರಶಿನ ಕುಂಕುಮಕ್ಕೆ ಕರೆಯುತ್ತಿದ್ದಾರೆ, ಬರಲಿ ಎಂದಿದ್ದೆ. ಆದರೆ ಅದಕ್ಕೂ ಬಂದಿಲ್ಲ. ಪಕ್ಕದ ಮನೆಯವರಾಗಿದ್ದರೂ ಒಮ್ಮೆಯೂ ನಾನು ಅವರ ಮುಖವನ್ನೂ ನೋಡಲಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಇನ್ನು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೆಎಸ್ ಈಶ್ವರಪ್ಪ, ನಾನು ಈ ಸರ್ಕಾರಕ್ಕೆ ಕೇವಲ ಹಿಂದೂಗಳ ಪರವಾಗಿ ಇರಿ ಎಂದು ಹೇಳುತ್ತಿಲ್ಲ. ಬದಲಾಗಿ ಎಲ್ಲರನ್ನೂ ಸಮಾನವಾಗಿ ನೋಡಲಿ ಎಂದಷ್ಟೇ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.