ಡಿಸೆಂಬರ್ 31 ಕ್ಕೆ ಬಸ್ ಮುಷ್ಕರ ಇರುತ್ತಾ, ಅನುಮಾನಗಳಿಗೆ ಇಲ್ಲಿದೆ ಉತ್ತರ
ಹೀಗಾಗಿ ಡಿಸೆಂಬರ್ 31 ರಿಂದ ಕೆಎಸ್ ಆರ್ ಟಿಸಿ ಸೇರಿದಂತೆ ಎಲ್ಲಾ ನಿಗಮಗಳ ಬಸ್ ಓಡಾಟವಿರಲ್ಲ ಎಂದು ಕರಪತ್ರವನ್ನೂ ಹಂಚಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಈಗಾಗಲೇ ಕ್ರಿಸ್ ಮಸ್ ಹಬ್ಬದ ನೆಪದಲ್ಲಿ ಊರಿಗೆ ತೆರಳಿರುವವರು ಓಡಾಡುವುದು ಹೇಗೆ ಎಂಬ ಆತಂಕವಾಗಿತ್ತು.
ಆದರೆ ಈಗ ನೌಕರರ ಒಕ್ಕೂಟ ಬಸ್ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ. ಡಿಸೆಂಬರ್ 31 ರಂದು ಎಲ್ಲಾ ಬಸ್ ಗಳೂ ಯಥಾವತ್ತು ಓಡಾಟ ನಡೆಸಲಿದೆ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಸಾರ್ವಜನಿಕರು ನಿರಾಳವಾಗುವಂತಾಗಿದೆ.