ಟಿವಿ ರಿಮೋರ್ಟ್‌ಗಾಗಿ ಗಲಾಟೆ: ಮನನೊಂದು ಬಾಲಕಿ ಆತ್ಮಹತ್ಯೆ

Sampriya

ಶನಿವಾರ, 21 ಡಿಸೆಂಬರ್ 2024 (16:00 IST)
ಶಿವಮೊಗ್ಗ: ಟಿವಿ ರಿಮೋಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಬಾಲಕಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಆತಂಕಕಾರಿ ಘಟನೆ ಸೂಳೆಬೈಲಿನಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಗ್ರಾಮದ ಸಹನಾ (16) ಎಂದು ಗುರುತಿಸಲಾಗಿದೆ.

ಟಿವಿಯ ರಿಮೋರ್ಟ್‌ಗಾಗಿ ಮಕ್ಕಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮೊಮ್ಮಗಳಿಗೆ ಅಜ್ಜಿ ಬೈದಿದ್ದಾರೆ.
ಮನನೊಂದು ಬಾಲಕಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳದುಬಂದಿದೆ.

ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ