ಗರ್ಭಿಣಿ ಮಹಿಳೆ ಮೇಲೆ ಅತ್ತೆಯ ಕ್ರೌರ್ಯ

ಶುಕ್ರವಾರ, 22 ಜುಲೈ 2022 (09:10 IST)
ಹೈದರಾಬಾದ್: ಗರ್ಭಿಣಿ ಮಹಿಳೆ ಮೇಲೆ ಅತ್ತೆ ಕ್ರೌರ್ಯ ಮೆರೆದಿದ್ದು, ಈಗ ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ.

ಮಗನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಸೊಸೆ ಮೇಲೆ ಅತ್ತೆಗೆ ಧ್ವೇಷವಿತ್ತು. ಇದೇ ಕಾರಣಕ್ಕೆ ಸೊಸೆಗೆ ಕಿರುಕುಳ ನೀಡಿದ್ದಾಳೆ.

ನಾಲ್ಕು ತಿಂಗಳ ಗರ್ಭಿಣಿ ಎನ್ನುವುದನ್ನೂ ಲೆಕ್ಕಿಸದೇ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾಳೆ. ಪರಿಣಾಮ ಮಹಿಳೆಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಹೊಟ್ಟೆಯಲ್ಲಿದ್ದ ಮಗುವನ್ನೂ ಕಳೆದುಕೊಂಡಿದ್ದಾಳೆ. ಇದೀಗ ಗಂಡ, ಅತ್ತೆಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ