ಸಾಲು ಸಾಲು ರಜಾ ದಿನ ಕೆಎಸ್ ಆರ್ ಟಿಸಿ ದರ ನೋಡಿದ್ರೆ ಬೆಚ್ಚಿಬೀಳ್ತೀರಿ!

ಬುಧವಾರ, 14 ಮಾರ್ಚ್ 2018 (11:15 IST)
ಬೆಂಗಳೂರು: ಯುಗಾದಿ ಹಬ್ಬದ ಬೆನ್ನಲ್ಲೇ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಶಾಕ್ ನೀಡಿದೆ. ಕೆಎಸ್ ಆರ್ ಟಿಸಿ ಬಸ್  ದರ ನೋಡಿದ್ರೆ ಬೆಚ್ಚಿ ಬೀಳ್ತೀರಿ.

ಈ ಮಾಸಾಂತ್ಯಕ್ಕೆ ಸಾಲು ಸಾಲು ರಜೆಯಿದೆ. ಆದರೆ ಟಿಕೆಟ್ ಬುಕ್ ಮಾಡಲು ಕೌಂಟರ್ ಗೆ ಹೋದರೆ ಶಾಕ್ ಆಗೋದು ಗ್ಯಾರಂಟಿ. ಯಾಕೆಂದರೆ ಬಸ್ ಪ್ರಯಾಣ ದರ ದುಪ್ಪಟ್ಟಾಗಿದೆ.

600 ರೂ. ಗಳಷ್ಟು ಟಿಕೆಟ್ ದರವಿರುವ ಪ್ರಯಾಣಕ್ಕೆ ಈ ಸಾಲು ಸಾಲು ರಜಾ ದಿನಗಳಂದು 1200 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಇದು ವೋಲ್ವೋ, ರಾಜಹಂಸ, ಸ್ಲೀಪರ್ ಬಸ್ ಗಳಿಗೆ ಅನ್ವಯವಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ದಂಗುಬಡಿದಂತಾಗಿದ್ದಾರೆ.

ವಿಶೇಷ ರಜಾ ದಿನಗಳಂದು ಪ್ರಯಾಣ ದರ ಹೆಚ್ಚಳವನ್ನು ಶೇ. 20 ರಿಂದ ಶೇ. 50 ಕ್ಕೆ ಏರಿಕೆ ಮಾಡಿದ್ದೇ ಈ ದುಬಾರಿ ಟಿಕೆಟ್ ದರಕ್ಕೆ ಕಾರಣವಾಗಿದೆ. ಇದರಿಂದಾಗಿ ಕುಟುಂಬ ಸಮೇತ ರಜಾ ದಿನಗಳಂದು ಬೆಂಗಳೂರಿನಿಂದ ಊರಿಗೆ ತೆರಳಲು ಯೋಜನೆ ಹಾಕಿಕೊಂಡವರು ಮತ್ತೊಮ್ಮೆ ಯೋಚಿಸುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ