ಕುಕ್ಕೆ ಸುಬ್ರಹ್ಮಣ್ಯ ಬಂದ್; ಕಾರಣ ಏನು?
ಶುಕ್ರವಾರ, 1 ಮಾರ್ಚ್ 2019 (20:44 IST)
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ನರಸಿಂಹಸ್ವಾಮಿ ಮಠದ ತೆಕ್ಕೆಗೆ ತೆಗೆದುಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳ ವಿರುದ್ಧ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಉಳಿಸುವಂತೆ ಆಗ್ರಹಿಸಿ ಮಾ. 7 ರಂದು ಸುಬ್ರಹ್ಮಣ್ಯ ಬಂದ್ಗೆ ಕರೆ ನೀಡಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದೆ. ಅಲ್ಲದೆ ಶಾಂತಿಯು ಪ್ರತಿಭಟನಾ ಮೆರವಣಿಗೆ ಮತ್ತು ಸಭೆ ನಡೆಯಲಿದೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಿವಾಸ್ ಅವರು ಭಕ್ತರ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ದೇವಸ್ಥಾನವನ್ನು ಎಂದಿಗೂ ಮಠಕ್ಕೆ ಸೇರಿಸಲು ಬಿಡುವುದಿಲ್ಲ. ರಾಜಕಾರಣಿಗಳು ಮಠಗಳ ಜೊತೆಗೆ ಸಂಪರ್ಕವಿಟ್ಟುಕೊಂಡಿದ್ದಾರೆ. ಹಾಗಾಗಿ ಸುಬ್ರಹ್ಮಣ್ಯ ದೇವಸ್ಥಾನವನ್ನು ಮಠಕ್ಕೆ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟವಿಚಾರದಲ್ಲಿ ಯಾವ ರಾಜಕಾರಣಿಗಳು ಧ್ವನಿಎತ್ತುತ್ತಿಲ್ಲ. ಇದು ಅಪಾಯದ ಸಂಕೇತ ಎಂದು ಆರೋಪಿಸಿದರು.
ಮಠದವರು ದೇವಸ್ಥಾನವನ್ನು ವಶಕ್ಕೆ ಪಡೆಯಲು ಹಿಂದೆಯೇ ಯೋಜನೆ ರೂಪಿಸಿದ್ದರು. ಇಂದು ಧರ್ಮದ ಬಗ್ಗೆ ಕಾಳಜಿಯಿರುವ ಯಾವುದೇ ಯತಿಗಳು ಹಣದ ವ್ಯಾಮೋಹಕ್ಕೆ ಬಿದ್ದಿಲ್ಲ. ಸಂಘ ಪರಿಹಾರ ಮಠದ ಪರವಾಗಿಲ್ಲ ಎಂದು ಕಿಶೋರ್ ಶಿರಾಡಿ ದೂರಿದರು.
ಸುಬ್ರಹ್ಮಣ್ಯ ದೇವಸ್ಥಾನ ಹಿತರಕ್ಷಣಾ ವೇದಿಕೆಯ ಶಿವರಾಂ ರೈ ಮಾತನಾಡಿ, ಕಾನೂನು ಮತ್ತು ಧರ್ಮದ ತಳಹದಿಯಲ್ಲಿ ಹೋರಾಟ ನಡೆಸಬೇಕಿದೆ ಎಂದರು.