ಫೇಸ್ಬುಕ್ ಸಂಸ್ಥೆ 'Moments' ಅಪ್ಲಿಕೇಷನ್ ನನ್ನು ಬಂದ್ ಮಾಡಿದ್ಯಾಕೆ ಗೊತ್ತಾ?
ಮಂಗಳವಾರ, 26 ಫೆಬ್ರವರಿ 2019 (06:49 IST)
ಬೆಂಗಳೂರು : ಫೇಸ್ಬುಕ್ ಬಳಕೆದಾರರಿಗೊಂದು ಕಹಿ ಸುದ್ದಿ. ಅದೇನೆಂದರೆ ಫೇಸ್ಬುಕ್ ಸಂಸ್ಥೆ 'Moments' ಅಪ್ಲಿಕೇಷನ್ ನನ್ನು ಫೆಬ್ರವರಿ 25ರಿಂದ ಕಾರ್ಯಸ್ಥಗಿತಗೊಳಿಸಿದೆ.
ಫೇಸ್ಬುಕ್ ಸಂಸ್ಥೆ 2015ರಲ್ಲಿ ಬಳಕೆದಾರರ ಫೋಟೋ ಸೇವ್ ಮಾಡಲು 'Moments' ಅಪ್ಲಿಕೇಷನ್ ನ್ನು ಪರಿಚಯಿಸಿತ್ತು. ಬಿಡುಗಡೆಯಾದ ಮೇಲೆ 8.7 ಕೋಟಿ ಐಒಎಸ್ ಹಾಗೂ ಆಂಡ್ರಾಯ್ಡ್ ಬಳಕೆದಾರರು ಇದನ್ನು ಡೌನ್ಲೋಡ್ ಮಾಡಿದ್ದರು. ಜೂನ್ 2016 ರಲ್ಲಿ ಆಪ್ 1.07 ಕೋಟಿ ಡೌನ್ಲೋಡ್ ಆಗಿತ್ತು.
ಆದರೆ ಕಳೆದ ಡಿಸೆಂಬರ್ ನಲ್ಲಿ ಬಳಕೆದಾರರ ಸಂಖ್ಯೆ 150,000ಕ್ಕೆ ಇಳಿದಿದೆ. ಈ ಹಿನ್ನಲೆಯಲ್ಲಿ ಇದೀಗ ಈ ಅಪ್ಲಿಕೇಷನ್ ಬಂದ್ ಮಾಡುತ್ತಿರುವುದಾಗಿ ಫೇಸ್ಬುಕ್ ಸಂಸ್ಥೆ ಹೇಳಿದೆ. ಆದರೆ ಫೇಸ್ಬುಕ್ ನಲ್ಲಿ Memories ಸೇವ್ ಆಗಲಿದೆ.
'Moments' ಅಧಿಕೃತವಾಗಿ ಬಂದ್ ಆಗುತ್ತಿರುವ ಹಿನ್ನೆಲೆಯಲ್ಲಿ ಬಳಕೆದಾರರಿಗೆ ಫೇಸ್ಬುಕ್ ನ ವೆಬ್ಸೈಟ್ ಒಂದರ ಮೂಲಕ ಫೋಟೋಗಳನ್ನು ವರ್ಗಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಮೇ ತಿಂಗಳವರೆಗೆ ಈ ಅವಕಾಶ ಬಳಕೆದಾರರಿಗೆ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.