ಕೆಂಪಯ್ಯರನ್ನು ಈ ಸರ್ಕಾರ ಇಟ್ಟುಕೊಂಡಿರೋದೇ ಹಣ ಸಾಗಣೆಗೆ: ಕುಮಾರಸ್ವಾಮಿ ಆರೋಪ
ಮಂಗಳವಾರ, 3 ಏಪ್ರಿಲ್ 2018 (11:07 IST)
ಹಾಸನ: ಚುನಾವಣೆ ಸಮಯದಲ್ಲಿ ಜನರಿಗೆ ಹಣ ಹಂಚಲು ನೋಟುಗಳ ಕಂತೆ ಸಾಗಣೆ ಸುಗಮವಾಗಲೆಂದೇ ರಾಜ್ಯ ಸರ್ಕಾರ ಗೃಹ ಸಚಿವರ ಸಲಹೆಗಾರರಾಗಿ ಕೆಂಪಯ್ಯರನ್ನು ಇಟ್ಟುಕೊಂಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಒಂದು ತಿಂಗಳಾದ ಮೇಲೆ ಜನರೇ ಇವರನ್ನು ಖಾಲಿ ಮಾಡಿಸ್ತಾರೆ. ಅಂತಹದ್ದರಲ್ಲಿ ಮುಖ್ಯ ಕಾರ್ಯದರ್ಶಿಗಳ ಅವಧಿ ವಿಸ್ತರಿಸುವ ಅಗತ್ಯವಿತ್ತೇ? ರಾಜ್ಯದಲ್ಲಿ ಬೇರೆ ಅಧಿಕಾರಿಗಳಿಗೆ ಬರವೇ?’ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ, ಈ ಸರ್ಕಾರ ಅಧಿಕಾರಿಗಳಿಗೆ ನಿರ್ಭೀತೆಯಿಂದ ಕೆಲಸ ಮಾಡಲು ಬಿಡುತ್ತಿಲ್ಲ. ಸದಾ, ಒತ್ತಡ, ಭಯದಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ