ಚುನಾವಣೆ ಹೊಸ್ತಿಲಲ್ಲೇ ಕಿಚ್ಚ ಸುದೀಪ್-ಕುಮಾರಸ್ವಾಮಿ ರಹಸ್ಯ ಭೇಟಿ!
ಇದಕ್ಕೂ ಮೊದಲು ಕುಮಾರಸ್ವಾಮಿ ಸುದೀಪ್ ಭೇಟಿಯಾಗಿ ಜೆಡಿಎಸ್ ಪರ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದರು. ಆದರೆ ಆಗ ಸುದೀಪ್ ಯಾವುದೇ ಭರವಸೆ ಕೊಟ್ಟಿಲ್ಲವೆನ್ನಲಾಗಿತ್ತು. ಇದೀಗ ಮತ್ತೆ ಕುಮಾರಸ್ವಾಮಿ, ಸುದೀಪ್ ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ, ‘ನಾವು ಭೇಟಿಯಾಗಿರುವುದು ನಿಜ. ಜೆಡಿಎಸ್ ಪರ ನಿಮ್ಮ ವೃತ್ತಿಗೆ ತೊಂದರೆಯಾಗದಂತೆ ಪ್ರಚಾರಕ್ಕೆ ಬರಲು ಆಹ್ವಾನಿಸಿದ್ದೇನೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ’ ಎಂದಿದ್ದಾರೆ.