ಕುಮಾರಸ್ವಾಮಿ ಮಹಾಭಾರತದ ಶಕುನಿ ಇದ್ದಹಾಗೆ-ಕಾಂಗ್ರೆಸ್ ವಾಗ್ದಾಳಿ,
ಬೆಂಗಳೂರಿನ ಐಟಿ ದಾಳಿ ವಿಚಾರವಾಗಿ ಕಾಂಗ್ರೆಸ್ ಸರ್ಕಾರ, ಡಿಕೆ ಶಿವಕುಮಾರ ವಿರುದ್ಧ ಕಿಡಿಕಾರಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು ಮಹಾಭಾರತದ ಶಕುನಿ, ರಾಮಾಯಣದ ಮಂಥರೆಗೆ ಹೋಲಿಸಿ ಕಾಂಗ್ರೆಸ್ ಟ್ವೀಟರ್ ಎಕ್ಸ್ ಮೂಲಕ ತೀವ್ರ ವಾಗ್ದಾಳಿ ನಡೆಸಿದೆ.ರಾಜ್ಯ ಆಡಳಿತ ರೂಢ ಕಾಂಗ್ರೆಸ್ ಟ್ವಿಟ್ ಮಾಡಿದ್ದು, ಕೈ ಹಿಡಿದವರ ತಲೆ ಕಡಿಯುವ, ಹೆಗಲು ಕೊಟ್ಟವರ ಬೆನ್ನಿಗೆ ಚೂರಿ ಹಾಕುವ, ನಂಬಿದವರಿಗೆ ನಾಮ ಬಳಿಯುವ ಕುಮಾರಸ್ವಾಮಿ ರಾಮಾಯಣದ ಮಂಥರೆ, ಮಹಾಭಾರತದ ಶಕುನಿಯೇ ಸರಿ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.