ಕುಮಾರಸ್ವಾಮಿ ಹತಾಶರಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ; ವಿಎಸ್ ಉಗ್ರಪ್ಪ ಆಕ್ರೋಶ

ಮಂಗಳವಾರ, 12 ಅಕ್ಟೋಬರ್ 2021 (17:57 IST)
ಬೆಂಗಳೂರು : ಕುಮಾರಸ್ವಾಮಿ ಬಗ್ಗೆ ವೈಯುಕ್ತಿಕ ಗೌರವವಿದೆ. ಆದರೆ ಅವರಿಗೆ ಹತಾಶೆ ಕಾಡುತ್ತಿದೆ. ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಜನತೆ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿದ್ದಾರೆ. ಬೇರೆಯವರ ಮೇಲೆ ಕೆಸೆರೆರಚುತ್ತಿದ್ದಾರೆ.

ಸರ್ಕಾರ ತೆಗೆಯಲು ಸಿದ್ದು ಕಾರಣ ಅಂತಾರೆ. ಆಪರೇಷನ್ ಕಮಲದ ಬಗ್ಗೆ ಚರ್ಚೆಯಾಗುತ್ತದೆ. ಆಗ ಕುಮಾರಸ್ವಾಮಿ ವಿದೇಶಕ್ಕೆ ಹೋಗ್ತಾರೆ. ಕುಮಾರಸ್ವಾಮಿ ವಿರುದ್ಧ ಅವಿಶ್ವಾಸ ಮಂಡಿಸ್ತಾರೆ. ಆಗಲೂ ಕಾಂಗ್ರೆಸ್ ಕಾರಣ ಅಂದಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಕಾರಣ ಅನ್ನೋದು ಸರಿಯಲ್ಲ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಗ್ರಪ್ಪ ಅವರು,  ಬಿಎಸ್ ವೈ ಆಪ್ತರ ಮೇಲಿನ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ನೀರಾವರಿ ಇಲಾಖೆಯಲ್ಲಿದೊಡ್ಡ ಹಗರಣ ನಡೆದಿದೆ. 15 ಸಾವಿರ ಕೋಟಿ ಹಗರಣ ನಡೆದಿದೆ. ಪ್ರತಿಪಕ್ಷಗಳ ಮೇಲೆ ಇಡಿ ದಾಳಿಯಾದರೆ ಮಾಹಿತಿ ಬಹಿರಂಗವಾಗುತ್ತದೆ. ಅಲ್ಲಿ ಎಷ್ಟು ಸಿಕ್ಕಿತ್ತು ಎಂಬುದನ್ನ ರಿಲೀಸ್ ಮಾಡ್ತಿದ್ರು. ಇಡಿ ಅಧಿಕಾರಿಗಳು ರಿಲೀಸ್ ಮಾಡ್ತಿದ್ರು. ಈಗ 18500 ಕೋಟಿ ಅಕ್ರಮ ನಡೆದಿದೆ. ದಾಳಿ ವೇಳೆ ಇದೆಲ್ಲವೂ ಪತ್ತೆಯಾಗಿದೆ. ಯಾಕೆ ಇಡಿ, ಐಟಿ ಮಾಹಿತಿ ಬಹಿರಂಗ ಮಾಡಿಲ್ಲ. ಐಟಿ ಅಧಿಕಾರಿಗಳು ಈ ಮಾಹಿತಿ ಬಹಿರಂಗಪಡಿಸಬೇಕು. ಬಿಎಸ್ವೈ ಆಪ್ತರ ಮೇಲಿನ ದಾಳಿ ಮಾಹಿತಿ ರಿಲೀಸ್ ಮಾಡಿ. ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಇದರ ಬಗ್ಗೆ ಕುಮಾರಸ್ವಾಮಿ ಮಾತನಾಡಲಿ ಎಂದು ಆಗ್ರಹಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ