ಕಾವೇರಿನ ನೀರಿನ ವಿಷಯವಾಗಿ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿ

ಬುಧವಾರ, 13 ಸೆಪ್ಟಂಬರ್ 2023 (15:22 IST)
ಕಾವೇರಿ ವಿಚಾರವಾಗಿ ಸರ್ವಪಕ್ಷ ಸಭೆ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.ನನಗೆ ಪೂರ್ವನಿಗಧಿತ ಕಾರ್ಯಕ್ರಮ ಇರುವುದರಿಂದ ಭಾಗಿಯಾಗಲ್ಲ.ಹದಿನೈದು ದಿನಗಳ ಹಿಂದೆಯೇ ಹಾಸನ ಕಾರ್ಯಕ್ರಮ‌ ನಿಗಧಿಯಾಗಿತ್ತು.ನಾನು ಇವತ್ತು ಸರ್ವಪಕ್ಷ ಸಭೆಗೆ ಭಾಗಿಯಾಗಲ್ಲ.ನಿನ್ನೆ ದಿನ ನೆಲಮಂಗಲದಲ್ಲಿ ರಾಜ್ಯದ ಇನ್ನೊಬ್ಬ ಮಾಜಿ ಸಿಎಂ ವೀರಪ್ಪ ಮೊಯಿಲಿ ಹೇಳಿಕೆ ನೀಡಿದ್ದಾರೆ.ಮಣ್ಣಿನ ಮಕ್ಕಳಿಂದ‌ ಕಾವೇರಿಗೆ ದ್ರೋಹ ಆಗಿರೋದು ಅಂತ ಹೇಳಿದ್ದಾರೆ.ಈ ಮಹಾನುಭಾವ ಎರಡು ವರ್ಷ ಸಿಎಂ ಆಗಿ ಮನೆಗೆ ಹೋಗುವಾಗ ಸಂಬಳ ಕೊಡಲು ವೆಸ್ಟ್‌ ಬೆಂಗಾಲ್‌ ಪಿಯರ್‌ಲೆಸ್‌ನಿಂದ ಸಾಲ ತಂದು ರಾಜ್ಯವನ್ನ ಅಡಇಟ್ಟ ಮಹಾನುಭಾವ.ಓಹೋ ಇವರು ಕವಿಸರ್ವೋತ್ತೋಮರು,ರಾಮಾಯಣದ ಮಹಾನ್ವೇಷಣೆ ಮಾಡಿದವರು.ಕಾವೇರಿ ಟ್ರಿಬ್ಯುನಲ್ ರಚಿಸುವಾಗ ಈ ಮಹಾನುಭಾವನ ಕೊಡುಗೆ ಏನು.?ದೇವೆಗೌಡರನ ಸೋಲಿಸಿ ಮನೆಗೆ ಕಳಿಸಿದ್ರಲ್ಲ ಇವರ ಕೊಡುಗೆ ಏನು?ಇವರಿಂದ ಹೇಳಿಸಿಕೊಳ್ಳಬೇಕಾ ನಾವು.ಪಾಪ ಅವರನ್ನ ಕರೆಸಿ ಕೂರಿಸಿಕೊಂಡು ಸಲಹೆ ಪಡೆದುಕೊಳ್ಳಿ.ನಮ್ಮ ಕುವೆಂಪುಗಿಂತ ಮೇಲ್ದರ್ಜೆಯ ಮಹಾನ್ವೇಷಣೆ ಮಾಡಿದವರಲ್ವ?ಅಂತಂತ ಮಹಾನುಭಾವರನ್ನ ಇಟ್ಕೊಂಡು ನಾವೇನು ಸಲಹೆ ಕೊಡೋದು.ಇವತ್ತು ನಮ್ಮನ್ನ ಕರೆದು ಏನ್‌‌ ಸಲಹೆ ಕೇಳ್ತೀಯಮ್ಮ ಅವಶ್ಯಕತೆ ಇಲ್ಲ,

ಯಾವ ಯಾವ ಸಂದರ್ಭದಲ್ಲಿ ಆ ಮಹಾನುಭಾವನಿಂದ ಏನೇನಾಯ್ತು?ಧರಂಸಿಂಗ್‌ಗೆ ದಾರಿ ತಪ್ಪಿಸಿದ್ದ ಈ ವ್ಯಕ್ತಿಯನ್ನ ಇಟ್ಕೊಳ್ಳಿ.ಈ ಸರ್ಕಾರಕ್ಕೆ ನಾಡಿನ ಜನರ ಹಿತರಕ್ಷಣೆಯ ತಿಳಿವಳಿಕೆಯೂ ಇಲ್ಲ.ತಾಕತ್ತು ಇಲ್ಲ, ಧಮ್ಮೂ ಇಲ್ಲ.ಬೆಂಗಳೂರಿಗೆ ಕುಡಿಯುವ ಎಲ್ಲಿಂದ ತಂದು ಕೊಡ್ತಾರೆ.ತಮಿಳುನಾಡಿನಲ್ಲಿ ಎಷ್ಟು ಎಕರೆ ಬೆಳೆ ಬೆಳೆದಿದ್ದಾರೆ, ಎಷ್ಟು ನೀರು ಬಿಟ್ರು ಅಂತ ಅಲ್ಲಿ ಮನದಟ್ಟು ಮಾಡಬೇಕಲ್ವಾ?ಹಿಂದೆ ಕಾವೇರಿ ವಾಟರ್ ಮ್ಯಾನೇ‌ಜ್‌ಮೆಂಟ್ ಬೋರ್ಡ್ ಮಾಡುವಾಗ ಪ್ರತಿಭಟಿಸಿದ್ದೇವೆ.ಸಂಕಷ್ಟ‌ದ ಬಗ್ಗೆ ತೀರ್ಮಾನ ಮಾಡದೆ ಪದೇ ಪದೇ ಕರ್ನಾಟಕದ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಆಗ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ