ಕುಮಾರಣ್ಣಾ ನಮ್ಮ ನಾಯಕ ಎನ್ನದೆ ಇನ್ನೇನು ಹೇಳಲಾಗುತ್ತೆ: ದೇವೇಗೌಡ ಲೇವಡಿ

ಶನಿವಾರ, 23 ಜುಲೈ 2016 (14:56 IST)
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಣ್ಣಾ ನಮ್ಮ ನಾಯಕ ಎನ್ನದೆ ಇನ್ನೇನು ಹೇಳಲಾಗುತ್ತೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಲೇವಡಿ ಮಾಡಿದ್ದಾರೆ. 
 
ಜೆಡಿಎಸ್‌ ಬಂಡಾಯ ಶಾಸಕರ ಅಮಾನತು ಕುರಿತು ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಉಚ್ಛಾಟನೆ ಆಗುವವರೆಗೂ ಅವರು ಪಕ್ಷದಲ್ಲೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಜೆಡಿಎಸ್‌ ಪಕ್ಷದಲ್ಲೇ ಇದ್ದೇವೆ ಎಂದು ಬಂಡಾಯ ಶಾಸಕರ ಹೇಳಿಕೆ ನೀಡಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ. ಅವರು ಈಗಲೂ ಪಕ್ಷದಲ್ಲೇ ಇದ್ದಾರೆ. ಅಮಾನತಾದ ಶಾಸಕರಿಗೆ ಈಗಲೂ ವಿಪ್ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.
 
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಣ್ಣಾ ನಮ್ಮ ನಾಯಕ ಎನ್ನದೆ ಇನ್ನೇನು ಹೇಳಲಾಗುತ್ತೆ. ಪಕ್ಷ ಸಂಘಟನೆ ಕುರಿತು ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದೇನೆ. 3 ತಂಡಗಳನ್ನು ಮಾಡಿಕೊಂಡು ರಾಜ್ಯಾದ್ಯಂತ ಪ್ರವಾಸ ಗೈಗೊಂಡು ಪಕ್ಷ ಸಂಘಟನೆ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
 
2018 ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಆದರೆ, ಆ ರಾಜಕೀಯ ನಿವೃತ್ತಿ ಪಡೆಯುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ಅವರ ಪ್ರಾಮಾಣಿಕತೆ ನೋಡಿ ಜನರು ಅವರಿಗೆ ಅಧಿಕಾರ ನೀಡುತ್ತಾರೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ