ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಜೆಡಿಎಸ್ ಸಮಾವೇಶದ ಬಳಿಕ ಮಾತನಾಡಿದ ಹೆಚ್ ಡಿಕೆ, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ನಡೆದ ಕಳ್ಳ ಸಾಗಾಣಿಕೆ ಹಾಗೂ ಅಲ್ಲಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಪ್ರಧಾನಿ ಮೋದಿ ಅವ್ರು ನೈತಿಕತೆ ಉಳಿಸಿಕೊಂಡಿಲ್ಲವೆಂದು ತೀವ್ರ ವಾಗ್ದಾಳಿ ನಡೆಸಿದ್ರು. ಇನ್ನು ಇದಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಹೊರತಾಗಿಲ್ಲ.ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ ಸಿದ್ದರಾಮಯ್ಯ, ಪಾದಯಾತ್ರೆ ಹೆಸ್ರಲ್ಲಿ ಅಧಿಕಾರ ಪಡೆದ್ರು. ಆದ್ರೆ ಬಳ್ಳಾರಿ ಜನರನ್ನು ಬಡತನದಲ್ಲಿಟ್ಟರೆಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಸಿದ್ದರಾಮಯ್ಯ ಅವ್ರ 5 ವರ್ಷದ ಆಡಳಿತದಲ್ಲಿ ಅಕ್ರಮ ಗಣಿಗಾರಿಕೆ ವಿಚಾರವಾಗಿ ಯಾರ ಮೇಲೆ ಕ್ರಮಕೈಗೊಂಡಿದೆ ತೋರಿಸಲಿ ಎಂದು ಪ್ರಶ್ನಿಸಿದ್ರು. ಇನ್ನು ಮೋದಿ ಅವ್ರು ಹೇಳಿದ ಹಾಗೆ ಸಿದ್ದರಾಮಯ್ಯ ಪಕ್ಷಾಂತರಿ ಸಿಎಂ. ನಾಳೆ ಬಿಜೆಪಿಗೆ ಹೋದ್ರೂ ಆಶ್ಚರ್ಯ ಪಡುವ ಹಾಗಿಲ್ಲವೆಂದರು.ಇನ್ನು ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಬಂತಂದ್ರೆ ಇದೇ ಸಿದ್ದರಾಮಯ್ಯ ನೇತೃತ್ವದಲ್ಲಿ 50-60 ಜನ ಶಾಸಕರ ಜೊತೆ ಬಿಜೆಪಿ ಬಾಗಿಲು ತಟ್ಟಿದ್ರೂ ಆಶ್ಚರ್ಯಪಡುವ ಹಾಗಿಲ್ಲವೆಂದು ಸಿದ್ದು ವಿರುದ್ಧ ಹೆಚ್ ಡಿಕೆ ವ್ಯಂಗ್ಯವಾಡಿದ್ರು.