ಬಿಎಂಟಿಸಿ ಬಸ್ ನಲ್ಲಿ ಲೇಬರ್ ಕಾರ್ಡ್ ಕಿರಿಕ್

ಬುಧವಾರ, 22 ಫೆಬ್ರವರಿ 2023 (14:18 IST)
ನಕಲಿ ಕಾರ್ಮಿಕ ಬಸ್ ಪಾಸ್ ತೋರಿಸದೇ ಕಂಡೆಕ್ಟರ್‌ ಜೊತೆ ಪ್ರಯಾಣಿಕ ಕಿರಿಕಿರಿ ಮಾಡಿಕೊಂಡಿದ್ದಾನೆ.ಲೇಬರ್ ಪಾಸ್ ತೋರಿಸಲು ಪ್ರಯಾಣಿಕ ಹಿಂದೇಟು ಹಾಕಿದ್ದು, ಕಾರ್ಮಿಕರ ಪಾಸ್ ತೋರಿಸಿ ಎಂದು ಕಂಡೆಕ್ಟರ್ ಕೇಳಿದರೂ ಅಸಾಮಿ ಪಾಸ್ ತೋರಿಸದೇ ಕಳ್ಳಾಟವಾಡಿದ್ದಾನೆ.
 
ಲೇಬರ್ ಪಾಸ್ ಇದೆ ಎನ್ನುತ್ತಾನೆ ಹೊರತು ತೋರಿಸದೇ ವಾಗ್ವಾದ ನಡೆಸಿದ .ಕಂಡೆಕ್ಟರ್   ಲೇಬರ್ ಪಾಸ್ ಇರುವ ಪ್ರಯಾಣಿಕರ ಜೊತೆ ವಾಗ್ವಾದ ನಡೆದು ಕೊನೆಗೆ ಪಾಸ್ ತೋರಿಸಲೇಬೇಕು ಎಂದಿದಕ್ಕೆ ಅಲ್ಲಿಂದ ಪ್ರಯಾಣಿಕ ಕೆಳಗಿಳಿದ .ಈ ಘಟನೆ ಯಶವಂತಪುರ BMTC ಬಸ್ ನಲ್ಲಿ ಜರುಗಿದೆ.
 
ಕಾರ್ಮಿಕರಲ್ಲದೇ ಇರುವವರಿಗೆ  ಉಚಿತ ಕಾರ್ಮಿಕ ಬಸ್ ಪಾಸ್ ಕೊಡ್ತಾರೆ ಅನ್ನುವ ಆರೋಪ ಮಾಡಿದ್ದು,ಸರಕಾರಿ ನೌಕರರು, ಐಟಿ, ಕಾರ್ಪೋರೇಟ್ ಕಂಪನಿ ಸಿಬ್ಬಂದಿಗಳ ಕಾರ್ಮಿಕ ಪಾಸ್ ಹೊಂದಿರುವ ಆರೋಪ ಕೇಳಿಬಂದಿದೆ.ಹೀಗೆ ಸಾವಿರಕ್ಕೂ ಹೆಚ್ಚು ಕಾರ್ಮಿಕ‌ ಬಸ್ ಪಾಸ್ ದುರ್ಬಳಕೆ ಆಗ್ತಿದೆ.ಈ‌ ಹಿಂದೆ ಕಾರ್ಮಿಕ ಬಸ್ ಪಾಸ್‌ನಲ್ಲಿ ಕನ್ನಡ ಅಲ್ಲದೆ ಬೇರೆ ಭಾಷೆಯಲ್ಲಿ ಪ್ರಿಂಟ್‌ ಆಗಿತ್ತು.ಈಗ  ನಕಲಿ ಕಾರ್ಮಿಕ ಪಾಸ್ ಬಳಸಿ ಪ್ರಯಾಣ ಮಾಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ