ನವೆಂಬರ್ ಕ್ರಾಂತಿ ಸದ್ದು ಬೆನ್ನಲ್ಲೇ ಚರ್ಚೆಗೆ ಕಾರಣವಾದ ಲಕ್ಷ್ಮಣ ಸವದಿ ಹೇಳಿಕೆ

Sampriya

ಭಾನುವಾರ, 26 ಅಕ್ಟೋಬರ್ 2025 (15:40 IST)
Photo Credit X
ಚಿಕ್ಕೋಡಿ: ರಾಜ್ಯ ಸಚಿವ ಸಂಪುಟ ಪುನರ್ ರಚನೆ ವಿಚಾರ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ. 

ಜನವರಿಯಲ್ಲಿ ನನಗೆ ಶುಕ್ರದೆಸೆ ಬರುವುದು ಪಕ್ಕಾ ಎನ್ನುವ ಮೂಲಕ ಡಿಸೆಂಬರ್ ಕ್ರಾಂತಿ ಬಗ್ಗೆ ಮತ್ತಷ್ಟು ಪುಷ್ಟಿ ನೀಡಿದೆ. 

ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ಪುನರ್ ರಚನೆ  ಆಗುವುದು ಮೊದಲೇ ಗೊತ್ತಿತ್ತು. ಶನಿವಾರ ಬೆಳಗಾವಿಯಲ್ಲಿ ಸಿಎಂ ಸಹ ಹೇಳಿದ್ದಾರೆ. ನನಗೆ ಸಚಿವನಾಗುವ ಸಂದರ್ಭ ಬರಲಿ. ಆ ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ನಾನು ಅಧಿಕಾರವನ್ನು ಕೇಳಿ ಪಡೆದವರನಲ್ಲ. ಭಗವಂತನ ಆಶೀರ್ವಾದ ಹಾಗೂ ಹೈಕಮಾಂಡ್ ಇಚ್ಛೆ ಇದ್ರೆ ಸಚಿವ ಸ್ಥಾನ ನನಗೆ ತಾನಾಗಿಯೇ ಬರುತ್ತದೆ. ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನ ನಾವು ನಿಭಾಯಿಸಲು ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ