ಸಿದ್ದರಾಮಯ್ಯರಿಗೆ 'ಹುಲಿ' ಹೆಸರು ಬಂದಿರುವುದರ ಬಗ್ಗೆ ಕಾರಣ ಬಿಚ್ಚಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್

Sampriya

ಗುರುವಾರ, 15 ಆಗಸ್ಟ್ 2024 (16:16 IST)
ಬೆಂಗಳೂರು: ಇಂದು ದೇಶದಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಮಾಣಿಕ್ ಶಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಮುಖ್ಯಮಂತ್ರಿಗಳ ಸುರಕ್ಷತೆ ದೃಷ್ಟಿಯಿಂದ ಹಾಕಲಾಗಿದ್ದ ಬುಲೆಟ್‌ ಪ್ರೂಫ್ ಗ್ಲಾಸ್‌ ಅನ್ನು ತೆಗೆಸಿ ಸಿಎಂ ಸಿದ್ದರಾಮಯ್ಯ ಎಲ್ಲರ ಗಮನ ಸೆಳೆದರು. ಭಾಷಣಕ್ಕೂ ಮುನ್ನಾ ಪೊಲೀಸರ ಬಳಿ ನನಗೆ ಬುಲೆಟ್ ಪ್ರೂಫ್ ಬೇಡ ಮೊದಲು ತೆಗಿರಪ್ಪ ಎಂದು ಹೇಳಿದರು. ಅದರಂತೆ ಪೋಡಿಯಂಗೆ ಹಾಕಿದ್ದ ಬುಲೆಟ್ ಪ್ರೂಫ್ ಗ್ಲಾಸ್‌ ಅನ್ನು ತೆಗೆದು ಹಾಕಿದರು. ಇದಾದ ಬಳಿಕ ಯಾವುದೇ ರಕ್ಷಾಕವಚ ಇಲ್ಲದ ಪೋಡಿಯಂನಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣ ಮಾಡಿದರು.

ಸಿಎಂ ಸಿದ್ದರಾಮಯ್ಯ ಅವರು ಬುಲೆಟ್ ಪ್ರೂಫ್ ಗ್ಲಾಸ್ ತೆಗೆದು ಭಾಷಣ ಮಾಡಿದ್ದಕ್ಕೆ ಪಕ್ಷದ ನಾಯಕರು ಅವರನ್ನು ಕೊಂಡಾಡಿದ್ದಾರೆ.

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ನಮ್ಮ ರಾಜ್ಯ ಶಾಂತಿ ಪ್ರಿಯವಾಗಿದ್ದು, ಇಲ್ಲಿನ ಬುಲೆಟ್ ಪ್ರೂಫ್ ಬೇಕಾಗಿಲ್ಲ. ನಮ್ಮ ಸಿದ್ದರಾಮಯ್ಯನವರು ಯಾವತ್ತೂ ದೈರ್ಯವಂತರು. ಅದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯನವರಿಗೆ ಹುಲಿ ಎಂದು ಹೆಸರು ಬಂದಿರುವುದೇ ಈ ಕಾರಣಗಳಿಗೆ ಎಂದು ಕೊಂಡಾಡಿದರು. ‌

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ