ಎತ್ತಿನಹೊಳೆ ಯೋಜನೆಗೆ ಭೂಮಿ ದುರ್ಬಳಕೆ: ಮಾಜಿ ಶಾಸಕರ ಪುತ್ರಿ ಆರೋಪ, ಧರಣಿ
ಬುಧವಾರ, 19 ಡಿಸೆಂಬರ್ 2018 (11:19 IST)
ಎತ್ತಿನಹೊಳೆ ಯೋಜನೆಗೆ ಭೂಮಿ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಒಂಟಿಮಹಿಳೆ ಪ್ರತಿಭಟನೆ ಮಾಡುತ್ತಿದ್ದಾರೆ.
ತೋಟದ ಬೇಲಿ ಕಿತ್ತುಹಾಕಿ ಬೆಳೆನಾಶವಾಗಿದೆ. ಅನುಮತಿ ಇಲ್ಲದೆ ತೋಟಕ್ಕೆ ಅತಿಕ್ರಮಣ ಪ್ರವೇಶ ಮಾಡಲಾಗಿದೆ ಎಂದು ದೂರಿ ನ್ಯಾಯಕ್ಕಾಗಿ ಹಾಸನದ ಜಿಲ್ಲಾಧಿಕಾರಿ ಮುಂದೆ ಒಂಟಿಮಹಿಳೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಾಜಿ ಶಾಸಕ ದಿ. ಕೆ.ಎಂ.ರುದ್ರಪ್ಪರವರ ಪುತ್ರಿ ರೂಪಲತಾ ಹಾಸನ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಕಲೇಶಪುರ ತಾಲ್ಲೂಕಿನ ಹೆಬ್ಬಾಸಾಲೆ ತೋಟದಲ್ಲಿ ಹಾದುಹೋಗಿರುವ ಪೈಪ್ ಲೈನ್ ಅನಧಿಕೃತವಾಗದೆ. ಗಮನಕ್ಕೆ ತಾರದೆ ತೋಟದ ಬೇಲಿ ದ್ವಂಸ ಮಾಡಲಾಗಿದೆ. ಪ್ರಶ್ನಿಸಿದರೆ ಎತ್ತಿನ ಹೊಳೆ ಯೋಜನೆ ಅಧಿಕಾರಿಗಳಿಂದ ಅನಾಗರಿಕ ವರ್ತನೆ ತೋರುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ತೋಟಕ್ಕೆ ಬೇಲಿ ನಿರ್ಮಿಸಿ ಕೆಲಸ ಮುಂದುವರೆಸುವಂತೆ ಡಿಸಿಗೆ ಮನವಿ ಮಾಡಿದ್ದಾರೆ. ಬೇಲಿ ಇಲ್ಲದೆ ಕೊಯ್ಲಿಗೆ ಬಂದ ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಹೀಗಾಗಿ ನ್ಯಾಯ ಕೊಡಿಸುವಂತೆ ಪ್ರತಿಭಟನಾನಿರತ ರೂಪಲತಾ ಮನವಿ ಮಾಡಿದ್ದಾರೆ.