ಋಣಮುಕ್ತ ಯೋಜನೆಗೆ ಸರ್ಕಾರದಿಂದ ಎಳ್ಳು ನೀರು..?
ಋಣಮುಕ್ತ ಯೋಜನೆಗೆ ಸರ್ಕಾರದಿಂದ ಎಳ್ಳು ನೀರು ಬಿಡಲಾಗಿದೆಯಾ? ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಏಕಂದರೆ ಒಂದೆಡೆ ಸರಕಾರ ಋಣಮುಕ್ತ ಪತ್ರಗಳನ್ನು ವಿತರಣೆ ಮಾಡುತ್ತಿದ್ದರೆ ಮತ್ತೊಂದೆಡೆ ಬ್ಯಾಂಕ್ ಗಳು ರೈತರಿಗೆ ನೋಟೀಸ್ ಜಾರಿಗೊಳಿಸಿ, ನ್ಯಾಯಾಲಯಕ್ಕೆ ಅಲೆಯುವಂತೆ ಮಾಡುತ್ತಿವೆ.
ಸಾಲ ಮರುಪಾವತಿಸುವಂತೆ ಬ್ಯಾಂಕ್ ನಿಂದ ನೋಟೀಸ್ ಜಾರಿಗೊಳಿಸಲಾಗಿದೆ. ಆಂಧ್ರಬ್ಯಾಂಕ ನಿಂದ ರೈತರಿಗೆ ನೋಟೀಸ್ ಜಾರಿಮಾಡಲಾಗಿದೆ. ಕಲಬುರಗಿಯ ಗಣಜಲಖೇಡದ 25 ಕ್ಕೂ ಹೆಚ್ಚು ರೈತರಿಗೆ ನೋಟೀಸ್ ಬಂದಿದೆ.
ಸರಕಾರ ಸಾಲಮನ್ನಾ ಘೋಷಿಸಿದೆ. ಆದರೂ ನೋಟೀಸ್ ನೀಡಿದ ಆಂಧ್ರ ಬ್ಯಾಂಕ್ ನ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಲಬುರ್ಗಿಯ ಸೂಪರ್ ಮಾರ್ಕೆಟ್ ನಲ್ಲಿರುವ ಆಂಧ್ರಬ್ಯಾಂಕನಿಂದ ನೋಟೀಸ್ ಜಾರಿಮಾಡಲಾಗಿದ್ದು, ಲೋಕ್ ಅದಾಲತ್ ಗೆ ಹಾಜರಾಗುವಂತೆ ನೋಟೀಸ್ ದಲ್ಲಿ ಉಲ್ಲೇಖ ಮಾಡಲಾಗಿದೆ.