ನಂದಿಬೆಟ್ಟದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆ ಕುಸಿತ: ಇಂದಿನಿಂದಲೇ ಸಂಚಾರ ಬಂದ್!

ಭಾನುವಾರ, 29 ಆಗಸ್ಟ್ 2021 (19:12 IST)
ಬೆಂಗಳೂರು ಹೊರವಲಯದ ಪ್ರವಾಸಿ
ತಾಣವಾದ ನಂದಿಬೆಟ್ಟದಲ್ಲಿ ಮತ್ತೊಮ್ಮೆ ಭೂಕುಸಿತದ ವರದಿಯಾಗಿದ್ದು, ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಕೂಡ ಕುಸಿದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಬಳಿ ಭೂ ಕುಸಿತದ ಹಿನ್ನೆಲೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಾತ್ಕಾಲಿಕ ರಸ್ತೆಯೂ ಕುಸಿದಿದೆ.
ತಾತ್ಕಾಲಿಕ ರಸ್ತೆ ಕುಸಿದ ಪರಿಣಾಮ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಹಿಟಾಚಿ ಯಂತ್ರದ ಮಾಲಕ ಮಣ್ಣು ತೆರವು ಕಾರ್ಯಾಚರಣೆ ನಡೆದಿದೆ.
ಶಾಶ್ವತ ರಸ್ತೆ ನಿರ್ಮಾಣ ಕಾಮಗಾರಿಗೆ 2 ತಿಂಗಳು ಬೇಕಾಗಬಹುದು. ತಾತ್ಕಾಲಿಕ ರಸ್ತೆಯಲ್ಲಿ ಸಹ ಸಂಚಾರವನ್ನು ಇಂದಿನಿಂದಲೇ ಬಂದ್‌ ಮಾಡಲಾಗಿದೆ.
ನಂದಿಬೆಟ್ಟದ ಮೇಲೆ ಇದ್ದವರನ್ನೆಲ್ಲಾ ಸ್ಥಳಾಂತರ ಮಾಡಿ ತಾತ್ಕಾಲಿಕ ರಸ್ತೆ ಬಂದ್‌ ಮಾಡಲಾಗಿದೆ. ಮೇಲಿದ್ದ ವಾಹನಗಳನ್ನ ಸ್ಥಳಾಂತರ ಮಾಡಿ ಕಾಮಗಾರಿ ಆರಂಭ‌ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ