ಮಹಾತ್ಮ ಗಾಂಧೀಜಿಯವರ ವಿವಿಧ ಭಂಗಿಗಳ 26 ಶಿಲ್ಪಗಳು ಸಿದ್ಧಗೊಂಡಿದ್ದು, ನವೆಂಬರ್ 6 ರಂದು ಲೋಕಾರ್ಪಣೆಗೊಳ್ಳಲಿವೆ.
ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ರಾಜಣ್ಣ, ಮಾನಸ ಗಂಗೋತ್ರಿಯ ಗಾಂಧಿ ಅಧ್ಯಯನ ಸಂಸ್ಥೆ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ನವೆಂಬರ್ 6 ರಂದು ಗಾಂಧೀಜಿ ಕುರಿತ ಸಿಮೆಂಟ್ ಶಿಲ್ಪಗಳ ಲೋಕಾರ್ಪಣೆ ಸಮಾರಂಭ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತ ಇಲಾಖೆ , ಕರ್ನಾಟಕ ಶಿಲ್ಪಕಲಾ ಅಕಾಡಮಿ ಬೆಂಗಳೂರು, ರಂಗಾಯಣ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಸಹಕಾರದಲ್ಲಿ ಈ ಸಮಾರಂಭ ನಡೆಯುತ್ತಿದೆ ಎಂದರು.
ಗಾಂಧೀಜಿಯವರ ವಿವಿಧ ಭಂಗಿಗಳ 26 ಶಿಲ್ಪಗಳು ರೆಡಿಯಾಗಿವೆ. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ತಯಾರಿಸಲಾಗಿದೆ. ಸಚಿವರಾದ ಜಿ.ಟಿ. ದೇವೇಗೌಡರು ಉದ್ಘಾಟನೆ ಮಾಡಲಿದ್ದಾರೆ. ಸಮಾರಂಭದಲ್ಲಿ ವಿವಿಧ ಗಣ್ಯರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.