ಜೈಲಿನಿಂದ ಲಾರೆನ್ಸ್‌ ಬಿಷ್ಣೋಯಿಗೆ ಸಂದರ್ಶನಕ್ಕೆ ಅವಕಾಶ: 7 ಪಂಜಾಬ್ ಪೊಲೀಸರ ಅಮಾನತು

Sampriya

ಶನಿವಾರ, 26 ಅಕ್ಟೋಬರ್ 2024 (16:30 IST)
Photo Courtesy X
ಚಂಡೀಗಢ: ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರು ನೀಡಿದ ಸಂದರ್ಶನಕ್ಕೆ ಸಂಬಂಧಿಸಿದಂತೆ ಉಪ ಪೊಲೀಸ್ ವರಿಷ್ಠಾಧಿಕಾರಿಗಳು (ಡಿಎಸ್‌ಪಿ) ಗುರ್ಷರ್ ಸಂಧು ಮತ್ತು ಸಮ್ಮರ್ ವನೀತ್ ಸೇರಿದಂತೆ  ಏಳು ಪಂಜಾಬ್ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಪಂಜಾಬ್ ರಾಜ್ಯಪಾಲರ ನಿರ್ದೇಶನದ ಮೇರೆಗೆ ಪಂಜಾಬ್ ಗೃಹ ವ್ಯವಹಾರಗಳ ಇಲಾಖೆಯು ಅಮಾನತುಗೊಳಿಸುವಂತೆ ಆದೇಶಿಸಿದೆ.

ಆದೇಶದಲ್ಲಿ, "21.12.2023 ರಂದು ಹೊರಡಿಸಿದ ಆದೇಶಗಳ ಅನುಸಾರವಾಗಿ, ಪಂಜಾಬ್ ರಾಜ್ಯ ಮಾನವ ಹಕ್ಕುಗಳ ಆಯೋಗದ ವಿಶೇಷ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಶ್ರೀ ಪ್ರಬೋಧ್ ಕುಮಾರ್, I.P.S. ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

2022ರಲ್ಲಿ ಜೈಲಿನಲ್ಲೇ ನಡೆದಿದ್ದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಂದರ್ಶನ ವಿವಾದಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರಕಾರ 7 ಮಂದಿ ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ