ಲಕ್ಷ್ಮೀ ಹೆಬ್ಬಾಳ್ಕರ್ ಗೆ ಮೊದಲೇ ನೀಡಲಾಗಿತ್ತು ಅಪಘಾತದ ಮುನ್ಸೂಚನೆ

Krishnaveni K

ಮಂಗಳವಾರ, 14 ಜನವರಿ 2025 (16:53 IST)
ಬೆಳಗಾವಿ: ಇಂದು ಮುಂಜಾನೆ ಬೆಳಗಾವಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಾಯಗೊಂಡಿದ್ದಾರೆ. ಸಚಿವೆಗೆ ಈ ಅಪಘಾತದ ಬಗ್ಗೆ ಮೊದಲೇ ಮುನ್ಸೂಚನೆ ದೊರೆತಿತ್ತು ಎನ್ನಲಾಗಿದೆ.

ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಸಹೋದರ, ಎಂಎಲ್ ಸಿ ಚನ್ನರಾಜು ಜೊತೆಗೆ ಮನೆ ದೇವರ ಪೂಜೆಗೆ ತೆರಳಲು ಬೆಂಗಳೂರಿನ ನಿವಾಸದಿಂದ ಬೆಳಗಾವಿ ನಿವಾಸಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಇನ್ನೇನು ಮನೆ ತಲುಪಲು 15 ನಿಮಿಷವಿದೆ ಎಂದಾಗ ಅಪಘಾತವಾಗಿದೆ ಎಂದು ಚನ್ನರಾಜು ಮಾಧ್ಯಮಗಳಿಗೆ ಹೇಳಿದ್ದಾರೆ.

ಎರಡು ನಾಯಿಗಳು ಅಡ್ಡಬಂತು. ಅವುಗಳನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಹೊಡೆದಿದೆ ಎಂದು ಅವರು ಹೇಳಿದ್ದಾರೆ. ದೇವರ ಆಶೀರ್ವಾದಿಂದ ಅಕ್ಕ ಮತ್ತು ನಾವು ಚೆನ್ನಾಗಿದ್ದೇವೆ. ಶೀಘ್ರದಲ್ಲೇ ಅವರು ಕೆಲಸಕ್ಕೆ ಮರಳುತ್ತಾರೆ ಎಂದು ಚನ್ನರಾಜು ಹೇಳಿದ್ದಾರೆ.

ಅಪಘಾತದ ಬಗ್ಗೆ ಮೊದಲೇ ಭವಿಷ್ಯ ಹೇಳಿದ್ದರು
ಅಪಘಾತದ ಬಗ್ಗೆ ನಮಗೆ ಮೊದಲೇ ಹಿರಿಯರೊಬ್ಬರು ಭವಿಷ್ಯ ಹೇಳಿದ್ದರು ಎಂಬ ವಿಚಾರವನ್ನು ಚನ್ನರಾಜು ಬಿಚ್ಚಿಟ್ಟಿದ್ದಾರೆ. ಸಂಕ್ರಾಂತಿ ಆಜುಬಾಜು ಒಂದು ಅಪಘಾತವಾಗುತ್ತದೆ ಎಂದಿದ್ದರು. ಅದೀಗ ನಿಜವಾಗಿದೆ. ಆದರೂ ಈ ಅಪಘಾತ ನಮ್ಮ ಅಚಾತುರ್ಯದಿಂದಲೇ ಅಪಘಾತವಾಗಿದೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ