25 ವರ್ಷದ ಹಿಂದೆ ಮನೆ ಮನೆಗೆ ಪಾಂಪ್ಲೆಟ್ ಹಂಚುತ್ತಿದ್ದೆ: ಹಳೆ ದಿನ ನೆನಪಿಸಿದ ಲಕ್ಷ್ಮೀ ಹೆಬ್ಬಾಳ್ಕರ್

Krishnaveni K

ಶನಿವಾರ, 15 ಮಾರ್ಚ್ 2025 (15:52 IST)
ಬೆಂಗಳೂರು: ಪ್ರದೇಶ ಮಹಿಳಾ ಕಾಂಗ್ರೆಸ್ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಳೆಯ ದಿನಗಳನ್ನು ನೆನಪಿಸಿದರು.25 ವರ್ಷದ ಹಿಂದೆ ಮನೆ ಮನೆಗೆ ಪಾಂಪ್ಲೆಟ್  ಹಂಚುತ್ತಿದ್ದೆ ಎಂದಿದ್ದಾರೆ.

ಇಂದಿನ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಳಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ ಸಿ ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ, ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಮಂಜುಳಾ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ’25 ವರ್ಷದ ಹಿಂದೆ ನಾನು ಮನೆ ಮನೆಗೆ ಪಾಂಪ್ಲೆಟ್ ಹಂಚುತ್ತಿದ್ದೆ. ನಾನು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸಂದರ್ಭದಲ್ಲಿ ಎನ್ ಜಿಒಗಳನ್ನು ನಡೆಸಿಕೊಂಡು ಬಹಳ ಆಕ್ಟಿವ್ ಆಗಿದ್ದೆ. ಆಗ ನನಗೆ ನಮ್ಮ ಅಧ್ಯಕ್ಷರು ಡಿಕೆ ಶಿವಕುಮಾರ್ ಸಾಹೇಬ್ರು ಕರೆದು ರಾಮಲಿಂಗಾ ರೆಡ್ಡಿ ಮಗಳು ಸೌಮ್ಯ ರೆಡ್ಡಿನ ಬಹಳ ಆಕ್ಟಿವ್ ಇದ್ದಾಳೆ. ಅವಳನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ ಎಂದಿದ್ದರು. ಅದರಂತೆ ನಾನು ಸೌಮ್ಯಗೆ ಕರೆ ಮಾಡಿ ಒಟ್ಟಿಗೆ ಕೆಲಸ ಮಾಡೋಣ ಎಂದಿದ್ದೆ. ಈಗ ಸೌಮ್ಯ ಮಾಡುವ ಕೆಲಸಗಳನ್ನು ನೋಡಿದರೆ ನನಗೇ ಹೆಮ್ಮೆಯಾಗುತ್ತದೆ’ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಅಟ್ಲಾಂಟಿಕ್‌ ಸಾಗರದಲ್ಲಿ ಏಕಾಂಗಿಯಾಗಿ ರೋಯಿಂಗ್‌ ಮೂಲಕ 52 ದಿನಗಳಲ್ಲಿ 4800 ಕಿ.ಮೀ. ಕ್ರಮಿಸಿದ ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ ಮೊಮ್ಮಗಳಾದ ಅನನ್ಯಾ ಪ್ರಸಾದ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಹಿಳಾ ಸಬಲೀಕರಣ ಕುರಿತ ನಾಟಕವನ್ನು ಪ್ರದರ್ಶಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ