ಅಡುಗೆ ಅನಿಲ ಸಂಪರ್ಕಿಸುವ ಪೈಪ್ ನಲ್ಲಿ ಸೋರಿಕೆ

ಗುರುವಾರ, 16 ಮಾರ್ಚ್ 2023 (18:29 IST)
ಅನಿಲ‌ ಸಂಸ್ಕರಣೆ ಹಾಗೂ ವಿತರಣೆ ಮಾಡುವ ಗೇಲ್‌ ಸಂಸ್ಥೆಯು ನೆಲದಡಿಯಲ್ಲಿ ಅಳವಡಿಸಿದ್ದ ಅಡುಗೆ ಅನಿಲ ಸಂಪರ್ಕಿಸುವ ಪೈಪ್ ನಲ್ಲಿ ಸೋರಿಕೆಯಾಗಿ ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ  ಸಿಲಿಂಡರ್ ಸ್ಫೋಟವಾಗಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
 
ಲೈಖಾ ಅಂಜುಮ್(45) ಮುಬಾಸಿರಾ (40) ಗಾಯಾಳುಗಳಾಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಚ್ ಎಸ್ ಆರ್ ಲೇಔಟ್ ನ ಮದೀನಾ ಮಸೀದಿ ಬಳಿ ಜಮೀರ್ ಅಹಮದ್ ಎಂಬುವರ ಸೇರಿದ ಮನೆಯಲ್ಲಿ ಇಂದು ಬೆಳಗ್ಗೆ ದುರಂತ ಸಂಭವಿಸಿದೆ. ರಸ್ತೆಯೊಂದರಲ್ಲಿ ಬಿಬಿಎಂಪಿ‌ಯು ಡ್ರೈನೇಜ್ ಪೈಪ್ ಅಳವಡಿಸುವ ಸಂದರ್ಭದಲ್ಲಿ ಗೇಲ್ ಕಂಪೆನಿ ಅಳವಡಿಸಿದ್ದ ಪೈಪ್ ಗೆ ತಗುಲಿ ಸೋರಿಕೆಯಾಗಿದ್ದ ಎನ್ನಲಾಗಿದ್ದು ಈ ಸಂಬಂಧ ಮನೆಯೊಂದರಲ್ಲಿದ್ದ ಎರಡು ಸಿಲಿಂಡರ್ ಗಳು ಸ್ಫೋಟಗೊಂಡಿವೆ. ಸ್ಫೋಟದ ರಭಸಕ್ಕೆ ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ‌ ಸಮೀಪದ ಖಾಸಗಿ‌ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‌ದುರಂತದ ಪರಿಣಾಮ ಮನೆಯ‌ಲ್ಲಿರುವ  ಪಿಠೋಪಕರಣಗಳು ದ್ವಂಸಗೊಂಡಿವೆ. ಗಾಯಗೊಂಡವರ ಹೆಸರು ಲಭ್ಯವಾಗಿಲ್ಲ. ಮಾಹಿತಿ‌ ಆಧರಿಸಿ ಎಚ್ ಎಸ್ ಆರ್ ಲೇಔಟ್ ಪೊಲೀಸರು ಸ್ಥಳಕ್ಕೆ‌ ಧಾವಿಸಿ ಪರಿಶೀಲನೆ ‌ನಡೆಸುತ್ತಿದ್ದಾರೆ. ಸಂಬಂಧಪಟ್ಟ‌ ಗೇಲ್ ಕಂಪೆನಿ ಹಾಗೂ ಬಿಬಿಎಂಪಿ  ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
 
ಗೇಲ್ ಕಂಪೆನಿಯ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ. ಗೇಲ್ ಗ್ಯಾಸ್ ಪೈಪ್ ಹಾದು ಹೋಗಿದೆ ಎಂದು ಬೋರ್ಡ್ ಸಹ ಅಳವಡಿಸಿಲ್ಲ. ಕಾಮಗಾರಿ ವೇಳೆ ಸಹ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಪೈಪ್ ಲೈನ್ ಡ್ಯಾಮೇಜ್ ಆಗಿದೆ..ಜಮೀರ್ ಅವರ ಅಡುಗೆ ಮಾಡುವುದಕ್ಕೆ ಹೋದಾಗ ಬ್ಲಾಸ್ಟ್  ಆಗಿದೆ‌ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ