ದೇವನಹಳ್ಳಿಶಾಸಕ ನಿಸರ್ಗ ನಾರಯಾಣ ಸ್ವಾಮಿ ವಿರುದ್ಧ ಭ್ರಷ್ಟಚಾರ ಆರೋಪ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಶಾಸಕ ನಿಸರ್ಗ ನಾರಾಯಣಸ್ವಾಮಿ ಬಡವರ ಜಮೀನಿನ ದಾಖಲೆಗಳನ್ನ ಅಕ್ರಮ ತಿದ್ದುಪಡಿ ಮಾಡಿರುವ ಬಗ್ಗೆ ಸಾಮಜಿಕ ಕಾರ್ಯಕರ್ತ ಜಗದೀಶ್ ದೂರು ನೀಡಿದ್ದಾರೆ. ಸರ್ಕಾರಿ ನೌಕರರ ಪ್ರತಿಭಟನೆ ವೇಳೆ ಬಡವರ ಆಸ್ತಿ ಕಬಳಿಸಲು ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ.
ಸರ್ಕಾರಿ ನೌಕರರ ಮುಷ್ಕರ ದಿನದಂದು ತಾಲೂಕು ಕಚೇರಿಯ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅಕ್ರಮ ಪ್ರವೇಶ ಮಾಡಿ
ಕಚೇರಿಗೆ ಹೊರಗಡೆಯಿಂದ ಬೀಗ ಜಡಿದು ಒಳಗಡೆ ಸೇರಿಕೊಂಡು ದಾಖಲೆಗಳ ತಿದ್ದುಪಡಿ ಮಾಡಿರುವ ಆರೋಪ ಮಾಡಲಾಗಿದೆ.ಆ ದಿನ ನೂರಾರು ಜನ ಜಮಾಯಿಸುತ್ತಿದ್ದಂತೆ ಶಾಸಕರು ಪೊಲೀಸ್ರ ಸಹಾಯದಿಂದ ಸ್ಥಳದಿಂದ ಪರಾರಿಯಾಗಿದ್ರು.
ಭೂ ಮಾಫಿಯಾ, ಭೂ ಕಬಳಿಕೆಯ ದಂಧೆಯಲ್ಲೂ ತೊಡಗಿ ಪ.ಜಾತಿ ಪ.ಪಂಗಡದವರಿಗೆ ಯಾವುದೇ ಕೆಲಸವನ್ನ ಮಾಡಿಕೊಡದ ಆರೋಪ ಮಾಡಿದ್ದಾರೆ. ಹದ್ದುಗಿಡ ಹಳ್ಳದ ರಾಜಕಾಲುವೆ ಒಳಗೊಂಡಂತೆ 15 ಎಕರೆ ಭೂಮಿಯನ್ನ ಕಬಳಿಕೆ ಮಾಡಿ ಎನ್ಎಂ ಇನ್ ಕ್ಲೋವ್ ಅನ್ನುವ ಬಡಾವಣೆಯ ನಿರ್ಮಾಣಮಾಡಿದ್ದು,