ಯಡಿಯೂರಪ್ಪ ಬಗ್ಗೆ ನಾವು ಎಲ್ಲಿಯೂ ಒಂದು ಮಾತು ಆಡಿರಲ್ಲ.ನಾನು ಏನು, ನಂದು ಏನು ಕಾರ್ಯಕ್ರಮ ಮಾಡಬೇಕು.ಮುಂದೆ ನಾನು ಏನು ಮಾಡಬೇಕೋ ಅದರ ಕಡೆ ಗಮನ ಕೊಡಬೇಕಿತ್ತು.ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ದೇಶ ಕಂಡಂತಹ ಅಪ್ರತಿಮ ಪ್ರಧಾನಿ.ರಾಜ್ಯದಲ್ಲೂ ಕೂಡ ಯಡಿಯೂರಪ್ಪ ಅದೇ ರೀತಿ ಎಂದು ಸೋಮಣ್ಣ ಹೇಳಿದ್ದಾರೆ.
ಅಲ್ಲದೇ ವಿಜಯೇಂದ್ರ ಯಾರಿಗೆ ಎಚ್ಚರಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ.ಅವರ ಕೊಟ್ಟಿರುವ ಎಚ್ಚರಿಕೆ ನನ್ನ ತಲೆಯಲ್ಲೂ ಇಲ್ಲ.ಅವರಿಗೆ ನಾನು ಏನು ಹೇಳುವುದು ಇಲ್ಲ.ಯಡಿಯೂರಪ್ಪನವರ ಬಗ್ಗೆ ನಾವು ಯಾರು ಮಾತಾಡೋಕೆ ಆಗಲ್ಲ.ಆದರೆ ಕೆಲವೊಂದು ಸಾರಿ ಆಗುವಂತ ಸನ್ನಿವೇಶಗಳಲ್ಲಿ ಸತ್ಯಸತ್ಯತೆಗಳನ್ನು ಹೇಳಬೇಕಾಗುತ್ತದೆ.ವಿಜಯೇಂದ್ರಗೆ ಯಡಿಯೂರಪ್ಪ ಒಬ್ಬರೇ ಅಲ್ಲ ನಾಯಕರು.ನಮಗೂ ಅವರು ನಾಯಕರು, ಅವರು ನಿಮಗೆ ತಂದೆ ಇರಬಹುದು.ಯಡಿಯೂರಪ್ಪ ಮೇಲೆ ನಿಮ್ಮ ಒಬ್ಬರಿಗೆ ಅಲ್ಲ ಗೌರವ ಇರೋದು.ರಾಜ್ಯದ ೬.೫ ಕೋಟಿ ಜನರಿಂದಲೂ ಗೌರವ ಇದೆ.ವಿಜಯೇಂದ್ರ ಒಬ್ಬ ಯುವಕ ಇದ್ದಾನೆ.ಅವರು ಮುಂದೆ ಏನು ಆಗಬೇಕೋ ಎಂಬ ಕನಸ್ಸಿನಲ್ಲಿ ಅವರು ಹೆಜ್ಜೆ ಹಾಕಿದ್ರೆ ಹೈ ಕ್ಲಾಸ್ ಆಗುತ್ತದೆ ಎಂದು ವಸತಿ ಸಚಿವ ಸೋಮಣ್ಣ ವಿಜಯೇಂದ್ರಗೆ ತಿರುಗೇಟು ಕೊಟ್ಟಿದ್ದಾರೆ.