ಕೋವಿಡ್ ನಿಂದಾಗಿ ಕಳೆದ ಎರಡು ವರ್ಷಗಳಿಂದ ಸರಿಯಾಗಿ ಶಿಕ್ಷಣ ಸಿಗದೆ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗಿದ್ರು. ಹೀಗಾಗಿ ಮಕ್ಕಳಿಗೆ ಮತ್ತೆ ಹಳೆಯದನ್ನೆಲ್ಲ ಕಲಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮದಾಡಿ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಆದ್ರೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗ್ತಿದಿಯಾ ಅಂದ್ರೆ ಇಲ್ಲ . ಕಲಿಕಾ ಚೇತರಿಕೆ ಕಾರ್ಯಕ್ರಮ ಹಳ್ಳಹಿಡಿದಿದೆ. ಸರ್ಕಾರದ ಈ ಕಾರ್ಯಕ್ರಮ ಫ್ಲಾಪ್ ಆಗ್ತಿದೆ.ಹೌದು, ಕೋವಿಡ್ ನಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ರು. ಕಲಿತಿರುವುದನ್ನೆಲ್ಲ ಮರೆತ್ತಿದ್ರು. ಹೀಗಾಗಿ ಮಕ್ಕಳಿಗೆ ಕಲಿಕಾ ಚೇತರಿಕಾ ಕಾರ್ಯಕ್ರಮದಾಡಿ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಮುಂದಾಗಿತ್ತು. ಇನ್ನು ಶಾಲೆ ಮೇ 16 ರಿಂದ ಪ್ರಾರಂಭವಾಗಿದ್ದು, ಅಂದಿನಿಂದ ಕಲಿಕಾ ಚೇತರಿಕಾ ಕಾರ್ಯಕ್ರಮದಡಿ ಮಕ್ಕಳಿಗೆ ಶಿಕ್ಷಣ ನೀಡಲಾಗ್ತಿದೆ. ಅಂದ್ರೆ ಎಷ್ಟರ ಮಟ್ಟಿಗೆ ಮಕ್ಕಳಿಗೆ ಶಿಕ್ಷಣ ನೀಡಲಾಗ್ತಿದೆ ಅಂತಾ ನಗರದ ಚಾಮರಾಜಪೇಟೆಯ ಸರ್ಕಾರಿ ಪಬ್ಲಿಕ್ ಶಾಲೆ, ಮಲೇಶ್ವರಂ ನ್ನ ಸರ್ಕಾರಿ ಪಬ್ಲಿಕ್ ಸೇರಿದಂತೆ ನಗರದ ಬಹುತೇಕ ಶಾಲೆ ಒಳಗೆ ಹೋಗಿ ನೋಡಿದ್ರೆ ಎಷ್ಟೋ ಶಾಲೆಗಳಲ್ಲಿ ಶಿಕ್ಷಕರ ಹತ್ತಿರ , ಮಕ್ಕಳ ಹತ್ತಿರ ಯಾವುದೇ ಅಗತ್ಯ ಸಲಕರಣೆಗಳಿಲ್ಲ, ಪುಸ್ತಕ, ಪೇಪರ್ ಇಲ್ಲ. ಇದ್ಯಾವುದು ಇಲ್ಲ ಆದ್ಮೇಲೆ ಶಿಕ್ಷಕರು ಹೇಗೆ ಬೋಧನೆ ಮಾಡ್ತಾರೆ? ಈಗ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಗದೇ ಕಲಿಕಾ ಚೇತರಿಕಾ ಕಾರ್ಯಕ್ರಮ ಬೇರೆ ಹೆಸೆರಿಗಷ್ಟೇ ಸೀಮಿತವಾಗ್ತಿದೆ.
ಶಿಕ್ಷಣ ಇಲಾಖೆ ಕಲಿಕಾ ಚೇತರಿಕಾ ಕಾರ್ಯಕ್ರಮ ಜಾರಿಗೆ ತಂದ್ಮೇಲೆ ಶಿಕ್ಷರಿಗೆ ಪುಸ್ತಕ, ಅಗತ್ಯ ಸಲಕರಣೆ ಕೊಡಬೇಕು .ಆದ್ರೆ ಶಾಲೆ ಆರಂಭವಾಗಿ 15 ದಿನ ಕಳೆದ್ರು ಇನ್ನು ಶಿಕ್ಷಕರ ಕೈಗೆ ಪುಸ್ತಕ ಸೇರಿಲ್ಲ. ಶಿಕ್ಷಣ ಇಲಾಖೆಯಿಂದ ಬಂದ ವಾಟ್ಸಾಫ್ ಪಿಡಿಎಫ್ ಜೇರಾಕ್ಸ್ ಮಾಡಿಕೊಂಡು ಶಿಕ್ಷಕರು ಮಕ್ಕಳಿಗೆ ಹೇಗೋ ಬೋಧನೆಯನ್ನ ಮಾಡ್ತಿದ್ದಾರೆ . ಇನ್ನು ಸ್ವತಃ ಶಿಕ್ಷಕರೇ , ಮಕ್ಕಳೇ ಇನ್ನು ಪುಸ್ತಕ ಬಂದಿಲ್ಲ . ಬರುವ ನಿರೀಕ್ಷೆ ಇದೆ ಅಂತಿದ್ದಾರೆ. ಈ ಬಾರಿ ಪುಸ್ತಕ ಪ್ರೀಂಟ್ ತಡವಾಗಿದೆ. ಶಿಕ್ಷಕರ ಕೈಗೆ , ಮಕ್ಕಳ ಕೈಗೆ ಪುಸ್ತಕ ಸೇರಲು ಏನಿಲ್ಲ ಅಂದ್ರು ಒಂದು ತಿಂಗಳು ಬೇಕಾಗುತ್ತೆ. ಅಲ್ಲಿವರೆಗೂ ಮಕ್ಕಳಿಗೆ ಸರಿಯಾಗಿ ಶಿಕ್ಷಣ ಸಿಗಲ್ಲ. ಇನ್ನು ಪುಸ್ತಕ ಯಾವಾಗ ಕೈ ಸೇರುತ್ತೋ ಅಂತಾ ಶಿಕ್ಷಕರು ಜಾತಕ ಪಕ್ಷಿಯಂತೆ ಕಾಯ್ತಿದ್ದಾರೆ.ಇನ್ನು ಪುಟ್ಟ ಮಕ್ಕಳು ಮನೆಯಿಂದ ಪೆನ್ , ಪೇಪರ್ ತಗೊಂಡು ಬಂದು ಓದುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದಿಂದ ಎಲ್ಲ ಸೌಲಭ್ಯ ಕೊಡ್ತೇವೆ ಅನ್ನುವುದು ಬೇರೆ ಬಾಯಿ ಮಾತಿಗಷ್ಟೇ ಆದ್ರೆ ಮಕ್ಕಳಿಗೆ ಮಾತ್ರ ಮೆಲ್ನೋಟಕ್ಕೆ ಎಲ್ಲ ತಲುಪುತ್ತಿದೆ . ಆದ್ರೆ ಒಳಗೆ ಹೋಗಿ ವಿಚಾರಿಸಿ ನೋಡಿದ್ರೆ ಬೇರೆ ಹೆಸರಿಗಷ್ಟೇ , ಪ್ರತಿಷ್ಟೆಗಷ್ಟೇ ಅನ್ನುವುದು ಕಾಣುತ್ತೆ. ಸ್ವತಃ ಮಕ್ಕಳೇ ಇನ್ನು ಪುಸ್ತಕ ಕೊಟ್ಟಿಲ್ಲ ಅಂತಾರೆ. ಪುಸ್ತಕ ಕೊಡುವ ಮುನ್ನ ಕಲಿಕಾ ಚೇತರಿಕಾ ಕಾರ್ಯಕ್ರಮ ಪ್ರಾರಂಭ ಮಾಡಿದ ಸರ್ಕಾರ ಈಗಲಾದ್ರು ಪುಸ್ತಕ ಕೊಡಬಹುದಿತ್ತು ಇನ್ನು ಕೊಟ್ಟಿಲ್ಲ. ಮಕ್ಕಳಿಗೆ ಉಪಯೋಗವಾಗ್ಲಿ ಅಂತಾ ಶಿಕ್ಷಣ ಇಲಾಖೆ ಮಾಡಿರುವ ಕಲಿಕಾ ಚೇತರಿಕಾ ಕಾರ್ಯಕ್ರಮದ ಉದ್ದೇಶ ವಿಫಲವಾಗ್ತಿದೆ.ಈ ಬಾರಿ ಮಕ್ಕಳಿಗೆ ಪಠ್ಯ ಪುಸ್ತಕ ಕೊಡುವುದು ವಿಳಂಬವಾಗಿದೆ. ಆದ್ರು ಕಲಿಕಾ ಚೇತರಿಕಾ ಕಾರ್ಯಕ್ರಮದ ಪುಸ್ತಕ ಮಾತ್ರ ಕೊಡಬಹುದಿತ್ತು. ಅದನ್ನ ಕೂಡ ಕೊಟ್ಟಿಲ್ಲ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಇನ್ನಷ್ಟು ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಶಿಕ್ಷಣ ಇಲಾಖೆ ಬೇರೆ ಪ್ರತಿಷ್ಟೇಗಷ್ಟೇ ಕಲಿಕಾ ಚೇತರಿಕೆ ಕಾರ್ಯಕ್ರಮ ಮಾಡದೇ ಈ ನಿಟ್ಟಿನಲ್ಲಿ ಸ್ವಲ್ಪ ಗಮನಹರಿಸಬೇಕಿದೆ