ಹಾಸನದ ಐಗೂರು ಸೇತುವೆ ಮುಳುಗಡೆ

ಶನಿವಾರ, 29 ಜುಲೈ 2023 (18:31 IST)
ಹಾಸನದಲ್ಲೂ ಮಳೆ ಮುಂದುವರೆದಿದ್ದು, ಸಕಲೇಶಪುರ ತಾಲೂಕಿನ ಐಗೂರು ಹೊಳೆ ಉಕ್ಕಿ ಹರಿಯುತ್ತಿದೆ.ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸೇತುವೆಗಳು ಸಂಪೂರ್ಣ ಮುಳುಗಿ ಹೋಗಿದೆ. ಕುಂಬರಹಳ್ಳಿ- ಐಗೂರು-ಹೆತ್ತೂರು ರಸ್ತೆ ಸಂಪರ್ಕ ಕಡಿತವಾಗಿದ್ದು, ಸಕಲೇಶಪುರ, ಹೆತ್ತೂರು ಕಡೆ ಸಾಗಲು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ. ಬದಲಿಮಾರ್ಗವಾಗಿ ಯಸಳೂರು,  ಮಾರ್ಗದಲ್ಲಿ ಪ್ರಯಾಣ ಮಾಡುವಂತೆ ತಿಳಿಸಲಾಗಿದೆ. ಇನ್ನು, ಸೇತುವೆ ಮುಳುಗಿದ್ರು ಸಹ, ಐಗೂರು ಸೇತುವೆ ಮೇಲೆ ಬೈಕ್ ಸವಾರರು ಹರಸಾಹಸ ಪಟ್ಟು ಸೇತುವೆ ದಾಟಿ ತೆರಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ