ಹುಬ್ಬಳ್ಳಿ: ನೇಹಾ ಹತ್ಯೆ ನಂತರ ಮನೆಸುತ್ತಾ ಅನುಮಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಡಪಿಸಿದ ನಿರಂಜನ ಹಿರೇಮಠ ಅವರು ಸಿಎಂ ಬಳಿ ಮನೆಗೆ ಹೆಚ್ಚಿನ ಭದ್ರತೆ ಓದಗಿಸುವಂತೆ ಕೇಳಿಕೊಂಡಿದ್ದರು.
ಮನವಿ ಮಾಡಿದ ಬೆನ್ನಲ್ಲೇ ನಗರದ ಬಿಡನಾಳದಲ್ಲಿರುವ ನಿರಂಜನ ಹಿರೇಮಠ ನಿವಾಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜೀವ ಬೆದರಿಕೆಯಿದೆ ಎಂದು ನಿರಂಜನ ಅವರು ದೂರು ನೀಡಿದ್ದರು. ಹೀಗಾಗಿ ಭದ್ರತೆ ಒದಗಿಸುವ ಮೂಲಕ ರಾಜ್ಯ ಸರ್ಕಾರ ಸ್ಪಂದಿಸಿದೆ.
ಜೀವಬೆದರಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿದ ನಿರಂಜನ್ ಅವರು ನೇಹಾ ಹತ್ಯೆ ಪ್ರಕರಣ ರಾಷ್ಟಮಟ್ಟದಲ್ಲಿ ಸುದ್ದಿಯಾದ ನಂತರ ರಾಜಕೀಯ ಮುಖಂಡರು, ಗಣ್ಯರು ಭೇಟಿ ನೀಡಿ ಸಾಂತ್ವನ ನೀಡುತ್ತಿದ್ದಾರೆ. ಇದರ ಜತೆಗೆ ಮನೆ ಸುತ್ತಾ ಮುತ್ತಾ ಅನುಮಾಸ್ಪದ ವ್ಯಕ್ತಿಗಳು ಓಡಾಟ ನಡೆಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ಜೀವಬೆದರಿಕೆ ಇರುವುದರಿಂದ ನಮಗೆ ಭದ್ರತೆ ನೀಡಬೇಕೆಂದು ಕೋರಿದ್ದರು.
ಗುರುವಾರ ಸಿಎಂ ಸಿದ್ದರಾಮಯ್ಯ ಅವರು ನೇಹಾ ಮನೆಗೆ ಭೇಟಿ ಕೊಟ್ಟು ಪೋಷಕರ ಜತೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು. ಪ್ರಕರಣವನ್ನ ಸಿಐಡಿಗೆ ವಹಿಸಲಾಗಿದೆ. ಆರೋಪಿಗೆ ಘೋರ ಶಿಕ್ಷೆ ಕೊಡಿಸಲು ಪ್ರಯತ್ನಿಸುತ್ತೇನೆ ಎಂದಿದ್ದರು.
ಮಗಳು ನೇಹಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಫೋಷಕರಿಗೆ ಸಾಂತ್ವನ ಹೇಳಿ ಕುಟುಂಬದ ಸದಸ್ಯರು ಮತ್ತು ಬಂಧುಗಳೊಂದಿಗೆ ಚರ್ಚಿಸಿದರು.
ಆರೋಪಿಗೆ ಆತನ ಕೃತ್ಯಕ್ಕೆ ಸರಿಯಾದ ಕಾನೂನಿನ ಶಿಕ್ಷೆ ಕೊಡಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಈಗಾಗಲೇ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ತನಿಖೆ ಅತ್ಯಂತ ತ್ವರಿತವಾಗಿ ನಡೆಯುತ್ತಿದೆ.
ಇಂಥಾ ದುಷ್ಕರ್ಮಿಗಳು ಯಾರೇ ಇದ್ದರೂ ಮತ್ತೆ ಇಂಥಾ ಹೀನ ಕೃತ್ಯಕ್ಕೆ ಕೈ ಹಾಕಬಾರದು ಎನ್ನುವ ಸ್ಪಷ್ಟ ಎಚ್ಚರಿಕೆ ನೀಡುವ ರೀತಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.