‘ಲಿಂಗಾಯತರು ಕೋಮುವಾದಿ ಬಿಜೆಪಿಗೆ ಮತ ಹಾಕಬೇಡಿ’

ಮಂಗಳವಾರ, 3 ಡಿಸೆಂಬರ್ 2019 (18:12 IST)
ಪಕ್ಷಾಂತರಿಗಳಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. 15 ಕ್ಷೇತ್ರಗಳಲ್ಲಿ  ಕಾಂಗ್ರೆಸ್ ನ ಅಭ್ಯರ್ಥಿಗಳಿಗೆ ಜಯ ಸಿಗುತ್ತದೆ.

ಹೀಗಂತ   ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಬೆಳಗಾವಿಯ ಉಗಾರ ಪಟ್ಟಣದಲ್ಲಿ ಕಾಂಗ್ರೆಸ್ ಅಬ್ಯರ್ಥಿ ರಾಜು ಕಾಗೆ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಬಿಜೆಪಿಗೆ ಭ್ರಮ‌ ನಿರಸನ ಆಗಿದೆ. ಸಿಎಂ ಯಡಿಯೂರಪ್ಪ  ಲಿಂಗಾಯತ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ಅದು ತಪ್ಪು ಅಪರಾಧ.

ಕಾನೂನು ಸಚಿವ ಮಾಧುಸ್ವಾಮಿ ಮಂತ್ರಿಯಾಗಿ ಜಾತಿ ಧರ್ಮದ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ವೀರಶೈವ ಲಿಂಗಾಯತ ಎನ್ನುವದು ಜಾತ್ಯಾತೀತ ಸಮುದಾಯ ಎಂದರು.

ಲಿಂಗಾಯತರು ಕೋಮುವಾದಿ ಬಿಜೆಪಿಗೆ ಮತ ಹಾಕಬೇಡಿ ಅಂತ  ಈಶ್ವರ ಖಂಡ್ರೆ ಹೇಳಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ