ಫೆಬ್ರವರಿಯಲ್ಲಿ ರೈತಪರ ಹೊಸ ಬಜೆಟ್ ಮಂಡಿಸುವೆ ಎಂದ ಬಿ.ಎಸ್. ಯಡಿಯೂರಪ್ಪ
ಮಂಗಳವಾರ, 3 ಡಿಸೆಂಬರ್ 2019 (16:44 IST)
ರಾಜ್ಯದಲ್ಲಿ ಸ್ಥಿರ ಸರ್ಕಾರ ಮಾಡಲು ಎಲ್ಲ ಯೋಜನೆಗಳನ್ನೂ ರೂಪಿಸಿದ್ದೇನೆ. ಫೆಬ್ರವರಿಯಲ್ಲಿ ರೈತಪರವಾದ ಹೊಸ ಬಜೆಟ್ ಮಂಡಿಸುತ್ತೇನೆ.
ಹೀಗಂತ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇವತ್ತು ಉಪ ಚುನಾವಣೆಯ ಪ್ರಚಾರಕ್ಕೆ ಕೊನೆಯ ದಿನ. ಹದಿನೈದು ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಲೆ ಇದೆ. ಎಲ್ಲೆಡೆ ಬಿಜೆಪಿಗೆ ಜನಬೆಂಬಲ ಇದೆ. ಕಾಂಗ್ರೆಸ್ - ಜೆಡಿಎಸ್ ನವರು ಒಗ್ಗಟ್ಟಾಗಿದ್ದೇವೆ ಎನ್ನುತ್ತಾರೆ.
ಆದ್ರೆ ಯಾವ ಕ್ಷೇತ್ರದಲ್ಲೂ ಆ ವಾತಾವರಣ ಇಲ್ಲ. ಕಾಂಗ್ರೆಸ್, ಜೆಡಿಎಸ್ ನವರಿಗೆ ರಾಮಮೂರ್ತಿ ವಿರುದ್ಧ ಒಬ್ಬ ಅಭ್ಯರ್ಥಿಯನ್ನೂ ನಿಲ್ಲಿಸಲಾಗಲಿಲ್ಲ. ಈ ಮೂಲಕ ಉಭಯ ಪಕ್ಷದವರು ಸೋಲೊಪ್ಪಿಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದರು.
ಉಪಚುನಾವಣೆ ನಂತರ ಬಿ ಎಸ್ ವೈ ರಾಜೀನಾಮೆ ನೀಡುತ್ತಾರೆಂಬ ಕಾಂಗ್ರೆಸ್ ನವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಡಿಸೆಂಬರ್ 9 ಕ್ಕೆ ಏನಾಗುತ್ತದೆ ಎಂಬುದನ್ನು ನೀವೇ ನೋಡ್ತೀರಿ. ಅಲ್ಲಿಯವರೆಗೂ ಕಾದುನೋಡಿ. ಕಾಂಗ್ರೆಸ್ - ಜೆಡಿಎಸ್ ನವರು ತೆಪ್ಪಗಿರಲಿ ಎಂದು ರೇಗಿದ್ರು.