ಹಣದ ಆಸೆಗಾಗಿ LLB ಪ್ರಶ್ನೆ ಪತ್ರಿಕೆ ಸೋರಿಕೆ: ಮೂವರು ಅರೆಸ್ಟ್‌

Sampriya

ಬುಧವಾರ, 19 ಫೆಬ್ರವರಿ 2025 (15:51 IST)
ಬೆಂಗಳೂರು: ಜನವರಿ 23 ರಂದು ನಿಗದಿಯಾಗಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಎಲ್‌ಎಲ್‌ಬಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ  ಮೂವರನ್ನು ಸೈಬರ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಬಸವ ಶ್ರೀ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ನಾಗರಾಜ್, ಅವರ ಕಾರು ಚಾಲಕನೂ ಆಗಿದ್ದ ವಿದ್ಯಾರ್ಥಿ ಜಗದೀಶ್ ಹಾಗೂ ಬಂಗಾರಪೇಟೆ ಕಾನೂನು ಕಾಲೇಜ್‌ವೊಂದರ ವಿದ್ಯಾರ್ಥಿ ವರುಣ್ ಕುಮಾರ್ ಬಂಧಿತ ಆರೋಪಿಗಳು.

ಹಣದ ಆಸೆಗಾಗಿ ಈ ಮೂವರು ಆರೋಪಿಗಳು  ವಾಟ್ಸಾಪ್ ಮತ್ತು ಟೆಲಿಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ಪರೀಕ್ಷೆಗೆ ಒಂದು ದಿನದ ಮುಂಚಿತವಾಗಿ ಬರುವ ಪ್ರಶ್ನೆ ಪತ್ರಿಕೆಯನ್ನು ರಕ್ಷಿಸುವ ಜವಾಬ್ದಾರಿಯುತ ಪರೀಕ್ಷಕರಲ್ಲಿ ಒಬ್ಬರಾದ ಮತ್ತು ಕಸ್ಟೋಡಿಯನ್ ಆಗಿದ್ದ ನಾಗರಾಜ್ ಅವರದ್ದಾಗಿತ್ತು. ಆದರೆ ಅವರು ಕಾಲೇಜಿಗೆ ಹೆಚ್ಚಿನ ಫಲಿತಾಂಶಗಳು ಬರುವ ನಿರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ತೆರೆದು, ಫೋಟೋ ತೆಗೆದುಕೊಂಡು ತಮ್ಮ ವಿದ್ಯಾರ್ಥಿ ವರುಣ್ ಕುಮಾರ್ ಅವರೊಂದಿಗೆ ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ