Karnataka Annabhagya scheme: ದುಡ್ಡಿಲ್ಲ, ಅಕ್ಕಿ ಕೊಡಲು ಮುಂದಾದ ರಾಜ್ಯ ಸರ್ಕಾರ

Krishnaveni K

ಬುಧವಾರ, 19 ಫೆಬ್ರವರಿ 2025 (13:52 IST)
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯದ ಬಾಬ್ತು ನೀಡಬೇಕಾದ ಅಕ್ಕಿ ಕೊಡಲು ರಾಜ್ಯದ ಬಳಿ ದುಡ್ಡಿಲ್ಲ. ಹೀಗಾಗಿ ಈಗ ಅಕ್ಕಿ ಕೊಡಲು ತೀರ್ಮಾನಿಸಿದೆ.

ಕರ್ನಾಟಕ ಗ್ಯಾರಂಟಿಗಳ ಪೈಕಿ ಈಗ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಬಾಬ್ತು ಫಲಾನುಭವಿಗಳ ಖಾತೆಗೆ ಹಾಕದೇ ಮೂರು ತಿಂಗಳಾಗಿದೆ. ಹೀಗಾಗಿ ಜನ ಆಕ್ರೋಶಗೊಂಡಿದ್ದಾರೆ. ಮಾಧ್ಯಮಗಳೂ ಎಲ್ಲೇ ಹೋದರೂ ಸಚಿವರುಗಳನ್ನು ಇದೇ ಪ್ರಶ್ನೆ ಮಾಡುತ್ತಿದ್ದಾರೆ.

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಈಗ ಜನರಲ್ಲಿ ಅನುಮಾನ ಮೂಡಿದೆ. ಹೀಗಾಗಿ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಬಾರದು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ದುಡ್ಡಿನ ಬದಲು ಅಕ್ಕಿಯನ್ನೇ ಕೊಡಲು ಮುಂದಾಗಿದೆ.

ಅಕ್ಕಿಯ ಬಾಬ್ತು ಪ್ರತೀ ಕೆ.ಜಿ.ಗೆ 34 ರೂ. ನಂತೆ 5 ಕೆ.ಜಿ. ಅಕ್ಕಿಯ ಬೆಲೆಯನ್ನು ಫಲಾನುಭವಿಗಳಿಗೆ ನೀಡಲಾಗುತ್ತಿತ್ತು. ಆದರೆ ಈಗ ಅಕ್ಕಿಗೆ 22-28 ರೂ.ಗಳಿಗೆ ಸಿಗುತ್ತಿದೆ. ಹೀಗಾಗಿ ಹಣದ ಬದಲು ಅಕ್ಕಿಯನ್ನೇ ಕೊಡಲು ಸರ್ಕಾರ ತೀರ್ಮಾನ ಮಾಡಿದೆ. ಇನ್ನು ಮುಂದೆ ಅಕ್ಕಿಯ ಹಣದ ಬದಲು ಅಕ್ಕಿಯನ್ನೇ ಕೊಡಲು ತೀರ್ಮಾನಿಸಿರುವುದಾಗಿ ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ